ಮುರ್ತುಜಸಾಬ ಲತೀಪಸಾಬ ತಹಶೀಲ್ದಾರ ಅವರ ಬೆಂಕಿ ಅಪಘಾತಕ್ಕೀಡಾದ ದನದ ಶೆಡ್ ಅನ್ನು ಅಮೀನಗಡ ಕಂದಾಯ ನಿರಿಕ್ಷಕ ಡಿ.ಎಸ್. ಯತ್ನಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ಪಿಎಸ್‌ಐ ಜ್ಯೋತಿ ವಾಲಿಕಾರ ಇದ್ದರು. 
ಜಿಲ್ಲೆ

ಆಕಸ್ಮಿಕ ಬೆಂಕಿಗೆ ಶೆಡ್ ಭಸ್ಮ

ಕಮತಗಿ: ಪಟ್ಟಣದ ವಾರ್ಡ ನಂ.15ರಲ್ಲಿನ ಮುರ್ತುಜಸಾಬ ಲತೀಪಸಾಬ ತಹಶೀಲ್ದಾರ ಅವರ ದನದ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಿಯಂತ್ರಿಸುವ ಮೂಲಕ ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ.

ಬೆಂಕಿ ಅವಘಡದಲ್ಲಿ ದನದ ಶೆಡ್‌ನಲ್ಲಿದ್ದ ಬಿಳಿ ಜೋಳದ ಮೇವು, ಶೆಂಗಾ ಹೊಟ್ಟು ಸುಟ್ಟು ಹೋಗಿದ್ದು, ದನದ ಶೆಡ್‌ನಲ್ಲಿ ಕಟ್ಟಲಾಗಿದ್ದ ಎರಡು ಎಮ್ಮೆ ಮತ್ತು ಎರಡು ಕರುಗಳು ಗಂಭಿರ ಗಾಯಗೊಂಡಿವೆ. ಘಟನೆಯ ಕುರಿತು ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪಶು ವೈದ್ಯಾಧಿಕಾರಿ ಗಾಯಗೊಂಡಿದ್ದ ಎಮ್ಮೆ ಹಾಗೂ ಕರುಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಬೆಂಕಿ ಅವಘಡದಿಂದ ಒಟ್ಟು 1.65ಲಕ್ಷ ರೂ. ಸಂಭವಿಸಿದೆ ಎಂದು ಅಂದಾಜಿಸಲಾಗಿದೆ, ಘಟನೆಗೆ ನಿಖರವಾದ ಕಾರಣ ತಿಳಿದುಬಂದಿರುವದಿಲ್ಲ. ಘಟನಾ ಸ್ಥಳಕ್ಕೆ ಅಮೀನಗಡ ಕಂದಾಯ ನಿರೀಕ್ಷಕ ಡಿ.ಎಸ್. ಯತ್ನಟ್ಟಿ, ಅಮೀನಗಡ ಪೊಲೀಸ್ ಠಾಣೆ ಪಿಎಸ್‌ಐ ಜ್ಯೋತಿ ವಾಲಿಕಾರ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.