ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ ಮತ್ತು ಬೀದರ ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಇಂದು ಸೆಪ್ಟೆಂಬರ್ 2 ರಂದು ಎರಡು ಜಿಲ್ಲೆಯ ಎಲ್ಲಾ ಶಾಲೆಗಳಿಗೆ *ರಜೆಯನ್ನು ಘೋಷಿಸಿದೆ.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಆಯಾ ಜಿಲ್ಲೆಯ ಡಿಡಿಪಿಐಗಳು ಸೋಮವಾರ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ದಿನದ ಶೈಕ್ಷಣಿಕ ಕೊರತೆಯನ್ನು (ಭೋಧನೆ/ಕಲಿಕೆ) ನೀಗಿಸಲು ಮುಂದಿನ ೨ ಶನಿವಾರಗಳಂದು ಪೂರ್ಣಪ್ರಮಾಣದಲ್ಲಿ ಶಾಲೆ ನಡೆಸಲು ಮುಖ್ಯಗುರುಗಳು ಕ್ರಮವಹಿಸಲು ಡಿಸಿ ಫೌಜಿಯಾ ತರನ್ನುಮ್ ಸೂಚನೆ ನೀಡಿದ್ದಾರೆ.
ಆದೇಶ:
ಉಪನಿರ್ದೇಶಕರು (ಆಡಳಿತ) ಕಲಬುರಗಿ.