ಎನ್.ಆರ್.ಪುರದಲ್ಲಿ ಶ್ರೀದೇವಿ ವಿಗ್ರಹದ ಮೆರವಣಿಗೆಯಲ್ಲಿ ತಹಸೀಲ್ದಾರ್ ತನುಜಾ ಟಿ. ಸವದತ್ತಿ, ಜಿ.ದಿವಾಕರ, ಪ್ರಶಾಂತ ಶೆಟ್ಟಿ, ಟಿ.ಎಂ.ನಾಗರಾಜ್, ಪಿ.ಆರ್.ಸದಾಶಿವ ಇತರರಿದ್ದರು. 
ಜಿಲ್ಲೆ

ಭದ್ರಾ ಹಿನ್ನೀರಿನಲ್ಲಿ ಜಲಸ್ತಂಭನ

ಜಿ. ಗಜೇಂದ್ರ

ಎನ್.ಆರ್.ಪುರ: ಪಟ್ಟಣದ ಶರನ್ನವರಾತ್ರಿ ಸೇವಾ ಸಮಿತಿ ಗಣಪತಿ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀದೇವಿಯನ್ನು ಶನಿವಾರ ಭದ್ರಾ ಹಿನ್ನೀರಿನಲ್ಲಿ ಜಲಸ್ತಂಭನಗೊಳಿಸಲಾಯಿತು.
ದೇವಿಯ ಉತ್ಸವ ವಾದ್ಯಗೋಷ್ಠಿಯೊಂದಿಗೆ ಹೊರಟು ಪದ್ಧತಿಯಂತೆ ಗ್ರಾಮ ದೇವತೆಗಳಾದ ಶ್ರೀ ಗುತ್ಯಮ್ಮ, ಶ್ರೀ ಅಂತರಘಟ್ಟಮ್ಮ, ಶ್ರೀ ಕೊಟ್ಟೂರು ಬಸವೇಶ್ವರ ದೇವರುಗಳೊಂದಿಗೆ ಮಾರನವಮಿ ಬಯಲಿಗೆ ತೆರಳಿತು. ನಂತರ ತಹಸೀಲ್ದಾರ್ ತನುಜಾ ಸವದತ್ತಿ ಅವರಿಂದ ಬನ್ನಿ ಮುರಿಯುವ ಕಾರ್ಯಕ್ರಮ ನಡೆಯಿತು.
ರಾಜಬೀದಿಯಲ್ಲಿ ಸಾಗಿದ ಶ್ರೀದೇವಿಯ ಮೆರವಣಿಗೆ ಮೆಣಸೂರು ಸಮೀಪದ ಭದ್ರಾ ಹಿನ್ನೀರಿಗೆ ತಲುಪಿತು. ಅಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ನಂತರ ಆಕರ್ಷಕ ಸಿಡಿಮದ್ದು ಪ್ರದರ್ಶನ, ಭದ್ರಾ ಹಿನ್ನೀರಿನಲ್ಲಿ ತೆಪ್ಪೋತ್ಸವ ನಂತರ ದೇವಿಯ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು.
ಶರನ್ನವರಾತ್ರಿ ಸೇವಾ ಸಮಿತಿ ಅಧ್ಯಕ್ಷ ಜಿ.ದಿವಾಕರ, ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ, ಕಾರ್ಯದರ್ಶಿ ಟಿ.ಎಂ.ನಾಗರಾಜ್, ಗುತ್ಯಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ, ಮುಖಂಡ ಕೆ.ಎಂ.ಸುಂದರೇಶ್, ಸಮಿತಿ ಉಪಾಧ್ಯಕ್ಷ ಬಿಳಾಲುಮನೆ ಉಪೇಂದ್ರ, ಎನ್.ಆರ್.ನಾಗರಾಜ್, ಕೆ.ಸಂತೋಷಕುಮಾರ್, ಮಾಳೂರು ದಿಣ್ಣೆ ಪ್ರವೀಣ್‌ಕುಮಾರ್, ಎಂ.ಸಿ.ಗುರುಶಾಂತಪ್ಪ, ಶಶಿಧರ, ನಾಗೇಂದ್ರ, ಚಿನ್ಮಯ್, ಜಯಂತ್, ಎನ್.ಎಂ.ಕಾರ್ತೀಕ್, ಎಚ್.ಎನ್.ರವಿ ಶಂಕರ್, ವೈ.ಎಸ್.ರವಿ ಇತರರಿದ್ದರು.