ಜಿಲ್ಲೆ

ಇಂದಿನಿಂದ ಶತಚಂಡಿ ಯಾಗ

ಬೆಳಗಾವಿ: ನಾಡಿನ ಜನರ ಕಲ್ಯಾಣ ಮತ್ತು ಒಳಿತಿಗಾಗಿ ಮೇ 12ರಿಂದ 14ರ ವರೆಗೆ ಖಾನಾಪುರ ತಾಲೂಕಿನ ಪಾರವಾಡದಲ್ಲಿ ಶತಚಂಡಿ ಯಾಗ ಆಯೋಜಿಸಲಾಗಿದೆ ಎಂದು ಸುವರ್ಣ ಧಾಮ ಮಠದ ಸದ್ಗುರು ಪಾರವಾಡೇಶ್ವರ ಮಹಾರಾಜರು ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಚಂಡಿ ಯಾಗ ಉತ್ತರ ಕರ್ನಾಟಕದಲ್ಲಿ ಪಾರವಾಡದ ಸುವರ್ಣ ಧಾಮ ಮಠದಲ್ಲಿ ಮಾಡುತ್ತ ಬಂದಿದ್ದೇವೆ. ನಮ್ಮ ಮಠ ಪಾರಂಪರಿಕವಾಗಿದೆ. ಬಡ ಜನರಿಗಾಗಿ ಕೆಲಸ ಮಾಡುತ್ತದೆ. ಜನಸೇವೆ ಮಾಡುವುದು ನಮ್ಮ ಮಠದ ಉದ್ದೇಶ. ಬಡವರ ದುಃಖ-ದುಮ್ಮಾನ ದೂರ ಮಾಡಿ ಅವರ ಮುಖದಲ್ಲಿ ನಗು ಅರಳಿಸ ಬಯಸುತ್ತದೆ ಎಂದರು. ಯಾಗದಲ್ಲಿ ವಿವಿಧ ಮಠಾಧೀಶರು, ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಮೂರು ದಿನಗಳ ಕಾಲ ನಡೆಯಲಿರುವ ಶತಚಂಡಿ ಮಹಾಯಜ್ಞದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.