ಬೆಂಗಳೂರು: ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರನ್ನೆ ಟಾರ್ಗೆಟ್ ಮಾಡಿ ದೋಚುತ್ತಿದ್ದ ನಟೋರಿಯಸ್ ಶಾಸ್ತ್ರಿ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಕೊಡಿಗೇಹಳ್ಳಿ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ಶ್ರೀಪಾದ ಶಾಸ್ತ್ರಿ, ವಿನ್ಸೆಂಟ್ ಬಾಬು, ಆಕಾಶ್ ನಾಯ್ಡು ಎಂದು ಗುರುತಿಸಲಾಗಿದೆ.
ಬಂಧಿತರಿಂದ 1.5 ಲಕ್ಷ ರೂಪಾಯಿ ನಗದು, 7 ಗ್ರಾಂ ಚಿನ್ನ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರನ್ನು ಹಿಂಬಾಲಿಸಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿ ಸುಲಿಗೆ ಮಾಡುತ್ತಿದ್ದರು.
ಇದನ್ನೂ ಓದಿ: ಈಗ ತಾನೇ ಬಿಜೆಪಿಗೆ ಎಂಟ್ರಿ ಕೊಟ್ಟಿದ್ದೇವೆ… ಅದೆಲ್ಲಾ ಎಲ್ಲಿ ನಮಗೆ ಹೇಳ್ತಾರೆ ! : ಸಹಕಾರಿ ಸಚಿವ ಸೋಮಶೇಖರ್
ಈ ಗ್ಯಾಂಗ್ನ ದರೋಡೆ, ದೋಚುವಿಕೆ ಕುರಿತು ಸಂಜಯ ನಗರ ಮತ್ತು ಕೊಡಿಗೇ ಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಕೊಡಿಗೇಹಳ್ಳಿ ಪೊಲೀಸರು ಈ ಆರೋಪಿಗಳ ಬಂಧನಕ್ಕೆ ವಿಶೇಷ ಕಾರ್ಯಾಚರಣೆ ನಡೆಸಿತ್ತು. (ದಿಗ್ವಿಜಯ ನ್ಯೂಸ್)