ಮಂಗಳೂರು : ಶಕ್ತಿ ನಗರದ ಶಕ್ತಿ ವಸತಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಶಾಸ್ತಾ ವರ್ಕಾಡಿ ಇವರು ಮೇ 10 ರಿಂದ 19 ರವರೆಗೆ ಅಮೇರಿಕಾದ ಲಾಸ್‌ಎಂಜಲೀಸ್‌ನಲ್ಲಿ ನಡೆದ ದಿ ರಿಜನರೋನ್ ಐಎಸ್‌ಇಎಫ್ ಇಂಟರನ್ಯಾಶನಲ್ ಸೈನ್ಸ್ ಫೇರ್‌ನಲ್ಲಿ ಭಾಗವಹಿಸಿದ್ದಾರೆ. ಇವರು ಸ್ಮಾರ್ಟ್ ಕೊಪ್ರಾ ಡ್ರ್ವೆಯರ್ ವಿಜ್ಞಾನ ಮಾದರಿಯನ್ನು ಸಿದ್ದಪಡಿಸಿದ್ದರು.
ಈ ವಿಜ್ಞಾನ ಮೇಳದಲ್ಲಿ ಭಾರತದಿಂದ ಒಟ್ಟು 20 ಮಂದಿ ಭಾಗವಹಿಸಿದ್ದರು. ಜಗತ್ತಿನ 140 ದೇಶಗಳಿಂದ 2500ಕ್ಕೂ
ಹೆಚ್ಚು ವಿದ್ಯಾರ್ಥಿಗಳು ಈ ಅಂತಾರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಪಾಲ್ಗೊಂಡಿದ್ದರು.
ಶಾಸ್ತಾ ನಾಕ್ ವರ್ಕಾಡಿ ಇವರು ಶ್ರೀನಾಥ್ ವಿ.- ಚಂದ್ರಿಕಾ ಶ್ರೀನಾಥ್ ದಂಪತಿ ಪುತ್ರ. ಇವರು 2022-23 ರಲ್ಲಿ ಹರಿಯಾಣದ ಲೋಟಸ್‌ವ್ಯಾಲಿ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ನಡೆದ ಸಿಬಿಎಸ್‌ಇ ರಾಷ್ಟ್ರೀಯ ವಿಜ್ಞಾನ ಫೇರ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. 2023ರಲ್ಲಿ ಪೂನಾದ ಶಿವ ಛತ್ರಪತಿ ಸ್ಪೋಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ 50ನೇ ರಾಷ್ಟ್ರೀಯ ವೈಜ್ಞಾನಿಕ ಪ್ರದರ್ಶನದಲ್ಲಿ ಭಾಗವಹಿಸಿ ಪ್ರೋತ್ಸಾಹಕ ಬಹುಮಾನ ಪಡೆದಿದ್ದರು.
ಶಾಸ್ತಾ ವರ್ಕಾಡಿ ಇವರನ್ನು ಶಕ್ತಿ ಸಂಸ್ಥೆಯ ಸಂಸ್ಥಾಪಕ ಡಾ. ಕೆ. ಸಿ. ನಾಕ್, ಕಾರ್ಯದರ್ಶಿಸಂಜಿತ್ ನಾಕ್. ಪ್ರಧಾನ ಸಲಹೆಗಾರ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಮತ್ತು ಶಕ್ತಿ ವಸತಿಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಅಭಿನಂದಿಸಿದ್ದಾರೆ.