ಕಾರವಾರ: ಶರಾವತಿ ನದಿ ಕಣಿವೆ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಗೆ ಪರಿಸರ ಅನುಮತಿ ಪಡೆಯುವ ಸಂಬಂಧ ಗುರುವಾರ ಕರೆದಿದ್ದ ಪರಿಸರ ಸಾರ್ವಜನಿಕ ಅಹವಾಲು ಸಭೆಯಲ್ಲಿ ಒಟ್ಟು 4043 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಗೇರುಸೊಪ್ಪ ಗುತ್ತಿ ಕನ್ನಿಕಾ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಯಿತು. ಯೋಜನೆಯ ಜವಾಬ್ದಾರಿ ಹೊತ್ತಿರುವ ಕರ್ನಾಟಕ ವಿದ್ಯುತ್ ನಿಗಮದ ಇಇ ವಿಜಯ್ ಅವರು ಯೋಜನೆಯ ವಿವರಗಳನ್ನು ಪಿಪಿಟಿ ಮೂಲಕ ವಿವರಿಸಿದರು. ನಂತರ ಬೆಳಗ್ಗೆ 11 ಗಂಟೆಯಿಂದ ಪ್ರಾರಂಭವಾದ ಆಕ್ಷೇಪಣೆ ಆಲಿಕೆ ಸಾಯಂಕಾಲ 5.30 ರವರೆಗೂ ನಡೆಯಿತು. 50 ಕ್ಕೂ ಅಽಕ ಜನ ಮಾತನಾಡಿ ತಮ್ಮ ಆಕ್ಷೇಪಣೆ ಸಲ್ಲಿಸಿದರು. ಅಲ್ಲದೇ ಆನ್‌ಲೈನ್ ಮೂಲಕ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ಅಽಕಾರಿಗಳು ಮಾಹಿತಿ ನೀಡಿದ್ದಾರೆ. ಯಾರೊಬ್ಬರೂ ಯೋಜನೆಯ ಪರವಾಗಿ ಮಾತನಾಡಿಲ್ಲ. ಜಮೀನು ಬಿಟ್ಟುಕೊಡುವುದಿಲ್ಲ: ಬಂಗಾರಮಕ್ಕಿ ವೀರಾಂಜನೇಯ ಕ್ಷೇತ್ರದ ಮಾರುತಿ ಗುರೂಜಿ ಮಾತನಾಡಿ, ಕೆಪಿಸಿ ಈ ಹಿಂದೆ ಗೇರುಸೊಪ್ಪದಲ್ಲಿ ವಿದ್ಯುದಾಗಾರ ಪ್ರಾರಂಭಿಸಿದೆ. ಆದರೆ, ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಇದುವರೆಗೆ ನಯಾ ಪೈಸೆ ಸಿಎಸ್‌ಆರ್ ನಿಽಯನ್ನು ವಿನಿಯೋಗಿಸಿಲ್ಲ. 2006 ರಿಂದ ಪಂಪ್ಡ್ ಯೋಜನೆ ಪ್ರಾರಂಭಿಸಿದ್ದು, ಆಗ 4 ಸಾವಿರ ಕೋಟಿ ರೂ. ಇದ್ದ ಈಗ ಯೋಜನಾ ವೆಚ್ಚ ಈಗ 10,600 ಕೋಟಿ ರೂ.ಗೆ ಹೆಚ್ಚಿದೆ. ಅದರ ಹೊರೆ ಭರಿಸುವರ‍್ಯಾರು..?16 ಸಾವಿರ ಮರ ಕಡಿದು ಪ್ರಕೃತಿಯನ್ನು ಮರು ಸೃಷ್ಟಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಯೋಜನೆಯಲ್ಲಿ ನಿರಾಶ್ರಿತರಾಗುವವರು ಈಗಾಗಲೇ ಲಿಂಗನಮಕ್ಕಿ ಯೋಜನೆಗೆ ಒಮ್ಮೆ ನಿರಾಶ್ರಿತರಾದವರಾಗಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆಗೆ ಜಮೀನು ಬಿಟ್ಟುಕೊಡುವುದಿಲ್ಲ ಎಂದರು. ರಾಜ್ಯ ರೈತ ಸಂಘದ ಅಧ್ಯಕ್ಷ, ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಯೋಜನೆಯಿಂದ ರೈತರಿಗೆ ತೊಂದರೆಯಾಗಲಿದೆ. ಜನರಿಗೆ ಅನುಕೂಲವಾಗುವಂಥ ಘಟಪ್ರ ಅಣೆಕಟ್ಟೆ ಎತ್ತರಿಸುವಂಥ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿ ಎಂದು ಒತ್ತಾಯಿಸಿದರು. ಭಾರತೀಯ ಕಿಸಾನ್ ಸಂಘದ ಶಿವರಾಮ ಗಾಂವಕರ್, ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ, ಪರಿಸರ ವಿಜ್ಞಾನಿ ಡಾ.ಎಂ.ಡಿ.ಸುಭಾಷ್‌ಚಂದ್ರನ್, ಶಿವಾನಂದ ಕಳವೆ, ಹೋರಾಟಗಾರರಾದ ಶ್ರೀಜಾ ಚಕ್ರವರ್ತಿ, ಅಖಿಲೇಶ ಚಿಪ್ಳಿ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಸಿಪಿಐಎಂನ ಯಮುನಾ ಗಾಂವಕರ್, ವಕೀಲ ವಿಕ್ರಂ ನಾಯ್ಕ, ಶರಾವತಿ ಯೋಜನೆ ವಿರೋಽ ಹೋರಾಟಗಾರಟ ಸಮಿತಿಯ ಚಂದ್ರಕಾAತ ಕೊಚರೇಕರ್, ಸ್ಥಳೀಯ ಗ್ರಾಪಂ ಅಧ್ಯಕ್ಷರು ಮಾತನಾಡಿದರು. ಯೋಜನೆ ಜಾರಿ ಬೇಡ ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಜನ ವಿವಿಧ ಯೋಜನೆಗಾಗಿ ತ್ಯಾಗ ಮಾಡಿದ್ದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಜನರಿಗೆ ತಪ್ಪು ಮಾಹಿತಿ ನೀಡಿ ಕೆಪಿಸಿ ದಾರಿ ತಪ್ಪಿಸುತ್ತಿದೆ. ಯೋಜನೆಗೆ ವಿರೋಧವಿದೆ ಎಂಬುದಕ್ಕೆ ಇಲ್ಲಿ ಸೇರಿದ 4 ಸಾವಿರಕ್ಕೂ ಅಽಕ ಜನರೇ ಸಾಕ್ಷಿ. ನಾವು ಯೋಜನೆ ನಿಲ್ಲುವವರೆಗೂ ಹೋರಾಟ ಮಾಡುತ್ತೇವೆ ಎಂದರು. ಭಟ್ಕಳ ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಯೋಜನೆ ಆಗುವವರೆಗೆ ಮಾತ್ರ ಕೆಪಿಸಿ ನಮ್ಮ ಮಾತು ಕೇಳುತ್ತದೆ. ನಂತರ ನಿಷೇಽತ ವಲಯ ಎಂದು ಬೋರ್ಡ್ ಹಾಕಲಾಗುತ್ತದೆ. ನಾನು ಶಾಸಕನಾಗಿದ್ದಾಗಲೇ ಒಳಗೆ ಹೋಗಲು ಸಾಧ್ಯವಾಗಿಲ್ಲ ಎಂದರು.
ಇಡೀ ಜಿಲ್ಲೆಯನ್ನು ಭೂ ಕುಸಿತ ವಲಯ ಎಂದು ಘೋಷಿಸಲಾಗಿದೆ. ಇಲ್ಲಿ ಮತ್ತೆ ಸುರಂಗ ಮಾರ್ಗ ಮಾಡಿ ಯೋಜನೆ ಜಾರಿ ಮಾಡುವುದರಿಂದ ಭೂ ಕುಸಿತವಾಗುವುದಿಲ್ಲವೇ..?ಇದರಿಂದ ಯೋಜನೆ ಕೈಬಿಡಬೇಕು. ವೆಂಕಟರಮಣ ಹೆಗಡೆ ಕವಲಕ್ಕಿ, ಶ್ರೀಕುಮಾರ ಟ್ರಾವೆಲ್ಸ್ ಮಾಲೀಕ