ಶರಣಸೋಮನಾಳ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಗದ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಶಿವನಗೌಡ ಬಿರಾದಾರ ಗುಂಪು ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ವಿಜಯೋತ್ಸವ ಆಚರಿಸಲಾಯಿತು.  
ಜಿಲ್ಲೆ

ಶರಣಸೋಮನಾಳ ಪಿಕೆಪಿಎಸ್‌ಗೆ ಆಯ್ಕೆ

Vijayapura - Desk - Chinnayya Chinnayyanamath

ಹೂವಿನಹಿಪ್ಪರಗಿ: ಬಸವನಬಾಗೇವಾಡಿ ತಾಲೂಕಿನ ಶರಣಸೋಮನಾಳ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ(ಪಿಕೆಪಿಎಸ್)ದ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಶಿವನಗೌಡ ಬಿರಾದಾರ ಗುಂಪು ಭರ್ಜರಿ ಗೆಲುವು ಸಾಧಿಸಿದೆ.

ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರಲ್ಲಿ 7 ಸದಸ್ಯರು ನಿದೇರ್ಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 5 ನಿದೇರ್ಶಕರ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಿವನಗೌಡ ಬಿರಾದಾರ, ಅಯ್ಯನಗೌಡ ಪಾಟೀಲ, ಸಂಗನಗೌಡ ಧನ್ನೂರ, ಈರಣ್ಣ ಕಚನೂರ, ಬಸಲಿಂಗಪ್ಪಗೌಡ ಬಿರಾದಾರ, ವಿಜಯಶಾಲಿಗಳಾಗಿರುವುದಾಗಿ ಚುನಾವಣಾಧಿಕಾರಿ ಪಿ.ಎಂ.ನಾಯಕ ಘೋಷಣೆ ಮಾಡಿದರು.

ವಿಜೇತ ಅಭ್ಯರ್ಥಿಗಳ ಅಭಿಮಾನಿಗಳು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಗ್ರಾಮದ ಬಸವಲಿಂಗೇಶ್ವರ ಮಠದ ಆವರಣದಲ್ಲಿ ಹಮ್ಮಿಕೂಂಡಿದ್ದ ವಿಜಯೋತ್ಸವ ನಡೆಯಿತು. ಬಸವೇಶ್ವರ ಬ್ಯಾಂಕಿನ ನಿದೇರ್ಶಕ ಶಂಕರಗೌಡ ಬಿರಾದಾರ, ಸಂಗನಗೌಡ ನಾಡಗೌಡ, ಬಾಪುಗೌಡ ಧನ್ನೂರ, ಚನ್ನಬಸು ಕಚನೂರ, ಸುರೇಶ ದೇಸಾಯಿ, ಶರಣು ಯಾಳಗಿ, ಲಗಮಣ್ಣ ದಿಂಡವಾರ, ಬಸವರಾಜ ಅವಟಿ, ಮಲ್ಲಣ್ಣ ಹರನಾಳ, ಮಾತಗೌಡ ಬಿರಾದಾರ, ಅಪ್ಪಣ್ಣ ಕನ್ನೂಳ್ಳಿ, ಶರಣು ಯಾಳಗಿ, ಸಂಘದ ವ್ಯವಸ್ಥಾಪಕ ಎಸ್.ಎಂ.ದೇಸಾಯಿ ಇತರರಿದ್ದರು.