ವಿಜಯಪುರದ ಆನಂದ ನಗರದ ದಾನಮ್ಮ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಗೋಷ್ಠಿಯನ್ನು ವಿ.ಸಿ. ನಾಗಠಾಣ ಉದ್ಘಾಟಿಸಿದರು. ಎಂ.ಬಿ. ಸಜ್ಜನ, ಸದಾಶಿವ ನಾಡಗೌಡ, ಸುಭಾಷ ಕರಿಕಬ್ಬಿ ಮತ್ತಿತರರಿದ್ದಾರೆ. 
ಜಿಲ್ಲೆ

ಶರಣರ ಚಿಂತನೆಗಳು ಇಂದಿಗೂ ಪ್ರಸ್ತುತ

ವಿಜಯಪುರ: ಮಾನವೀಯ ಮೌಲ್ಯಗಳೇ ವಚನ ಸಾಹಿತ್ಯದ ಸಾರವಾಗಿದ್ದು ಸನ್ಮಾರ್ಗ ತೋರಿಸುತ್ತವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಸಿ. ನಾಗಠಾಣ ಹೇಳಿದರು.

ಇಲ್ಲಿನ ಆನಂದ ನಗರದಲ್ಲಿ ದಾನಮ್ಮ ದೇವಿ 14ನೇ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಭುವನೇಶ್ವರಿ ಮೇಲಿನಮಠ ಮಾತನಾಡಿ, ಕನ್ನಡ ಸಾಹಿತ್ಯ ಬೆಳೆಯಲು ವಚನ ಸಾಹಿತ್ಯದಿಂದ ಸಾಧ್ಯ. ಶಿವಶರಣರು ಸಾಮಾಜಿಕ ಕಂದಾಚಾರ ಹೋಗಲಾಡಿಸಿ ಸಮ ಸಮಾಜ ನಿರ್ಮಿಸಲು ವಚನ ಸಾಹಿತ್ಯ ಪ್ರೇರಣೆ ಎಂದರು.

ನ್ಯಾಯವಾದಿ ಮಹಮ್ಮದ ಗೌಸ ಹವಾಲ್ದಾರ ಮಾತನಾಡಿ, ಜಗತ್ತಿನ ಎಲ್ಲ ವಿಶ್ವ ವಿದ್ಯಾಲಯಗಳ ಜ್ಞಾನವನ್ನು ಮೀರಿಸುವ ಶಕ್ತಿ ಬಸವಾದಿ ಶರಣರಲ್ಲಿ ಅಡಗಿದೆ ಎಂದರು.

ಸಾಹಿತಿ ಶೋಭಾ ಮೇಡೆಗಾರ ವಚನ ಸಾಹಿತ್ಯದಲ್ಲಿ ಶರಣೀಯರ ಕೊಡುಗೆ ಕುರಿತು ಮಾತನಾಡಿದರು. ಎಂ.ಬಿ. ಸಜ್ಜನ, ಸದಾಶಿವ ನಾಡಗೌಡ, ಸುಭಾಷ ಕರಿಕಬ್ಬಿ ವೇದಿಕೆಯಲ್ಲಿದ್ದರು.

ದೇವಸ್ಥಾನ ಸಮೀತಿಯ ಅಧ್ಯಕ್ಷ ಅಪ್ಪು ಇಟಂಗಿ, ಎಂ.ಬಿ. ಮೂಲಿಮನಿ, ಎಚ್​.ಎಂ. ಬೋರಾವತ, ಎಸ್​.ಎಚ್​. ಪಾಟೀಲ, ರವೀಂದ್ರ ಬಾವೂರ, ಹಾಸಿಂಪೀರ ವಾಲಿಕಾರ, ಪ್ರೇಮ ನಂದಿ, ಎಂ.ಎಸ್​. ಮೇಟಿ, ಬಸವರಾಜ ಮರನೂರ, ಜಯಶ್ರೀ ಹಿರೇಮಠ, ಕಮಲಾ ಹೂಗಾರ, ಸುಜಾತ ಕತ್ತಿ, ಕಾಶಿಬಾಯಿ ಬೋರಾವತ, ರುದ್ರಗೌಡ ಪಾಟೀಲ ಮತ್ತಿತರರಿದ್ದರು.