ಜಿಲ್ಲೆ

ಶರನ್ನವರಾತ್ರಿ ಉತ್ಸವ 3ರಿಂದ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ವೆಂಕಟೇಶ್ವರ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದ ಅಭಿವೃದ್ಧಿ ಸೇವಾ ಸಂಘದಿಂದ ಅ. 3ರಿಂದ 12ರ ವರೆಗೆ ಶರವನ್ನರಾತ್ರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶ್ರೀ ಹರಿಗೆ ದಶಾವತಾರ ರೂಪದ ಅಲಂಕಾರ ನಡೆಯಲಿದೆ. ಅ. 3ರಂದು ಪಾಡ್ಯಮತ್ಸ್ಯ 4ರಂದು ಬಿದಿಗೆ ವರಾಹ, 5ರಂದು ತದಿಗೆನರಸಿಂಹ, 6ರಂದು ಚತುರ್ಥಿಧನ್ವಂತರಿ, 7ರಂದು ಪಂಚಮಿವಾಮನ, 8ರಂದು ಪಂಚಮಿರಾಮ, 9ರಂದು ಷಷ್ಠಿಕೃಷ್ಣ, 10ರಂದು ಸಪ್ತಮಿಪಾಂಡುರಅಗ, 11ರಂದು ಅಷ್ಟಮಿ ಮತ್ತು ನವಮಿ ದುರ್ಗಾದೇವಿ ಹಾಗೂ 12ರಂದು ದಶಮಿಕಲ್ಕಿ ಅವತಾರದಿಂದ ಅಲಂಕರಿಸಲಾಗುವುದು. ಪ್ರತಿದಿನ ಸಂಜೆ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.