ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವರು  
ಜಿಲ್ಲೆ

ನಂದಿಕೂರು ದೇವಳದಲ್ಲಿ ಶರನ್ನವರಾತ್ರಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.3ರಿಂದ 13ರವೆರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.

ನವರಾತ್ರಿಯ ಪ್ರತಿದಿನವೂ ಮಧ್ಯಾಹ್ನ 12 ಹಾಗೂ ರಾತ್ರಿ 8 ಗಂಟೆಗೆ ಮಹಾಪೂಜೆ, ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿ ಯಾಗ, ಮಧ್ಯಾಹ್ನ ಅನ್ನಸಂತರ್ಪಣೆ, ಬೆಳಗ್ಗೆ 9ರಿಂದ ಮತ್ತು ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, 8ರಂದು ಲಲಿತಾ ಪಂಚಮಿ, 11ರಂದು ದುರ್ಗಾಷ್ಟಮಿ, 12ರಂದು ಮಹಾನವಮಿ, ಸಾರ್ವಜನಿಕ ಚಂಡಿಕಾಯಾಗ, 1 ಗಂಟೆಯಿಂದ ಭೋಜನ ಕಾರ್ಯಕ್ರಮ ನಡೆಯಲಿದೆ. 13ರಂದು ವಿಜಯದಶಮಿ ಸಂಪನ್ನಗೊಳ್ಳಲಿದೆ.

3ರಂದು 9 ಗಂಟೆಯಿಂದ ಭಜನೆ, ಸಂಜೆ ಯಕ್ಷಗಾನ ತಾಳಮದ್ದಳೆ, 4 ನಾಮಸಂಕೀರ್ತನೆ, ಸಂಜೆ ಗೀತಗಾಯನ, 5ರಂದು ಭಕ್ತಿಗಾಯನ, ಕುಣಿತ ಭಜನೆ, ಸಂಜೆ ಭರತನಾಟ್ಯ, ನೃತ್ಯವೈವಿದ್ಯ, ಭಕ್ತಿಯ ಶಕ್ತಿ ಪೌರಾಣಿಕ ನಾಟಕ, 6ರಂದು ಸಂಗೀತ ಕಾರ್ಯಕ್ರಮ, ಭಜನಾ ಸಂಕೀರ್ತನೆ, ಮೋಹಿನಿ ಭಸ್ಮಾಸುರ ಯಕ್ಷಗಾನ ನಡೆಯಲಿದೆ.

7ರಂದು ಭಜನಾ ಕಾರ್ಯಕ್ರಮ, ಸಂಜೆ ಇಂದ್ರಜಿತು ಕಾಳಗ ಯಕ್ಷಗಾನ ತಾಳಮದ್ದಳೆ, 8ರಂದು ಭಕ್ತಿ ಸಿಂಚನ, ಸಂಗೀತ ಸುಧೆ, ಭರತನಾಟ್ಯ, 9ರಂದು ಸಂಗೀತ ಸುಧಾ, ಭಜನೆ, ನಾಟ್ಯ ವೈಭವ ನಡೆಯಲಿದೆ. 12ರಂದು ಬೆಳಗ್ಗೆ ಸಂಗೀತ ಸುಧೆ, ಭಜನೆ, ಸಂಜೆ ಅಮರನಾಥ ಅಮರ ಕಥೆ ಶಿವಕಥಾ ಕಿರುನಾಟಕ ಪ್ರದರ್ಶನಗೊಳ್ಳಲಿದೆ. ಅದೇ ದಿನ ಸಾರ್ವಜನಿಕ ಚಂಡಿಕಾಯಾಗ ನಡೆಯಲಿದ್ದು, ಬೆಳಗ್ಗೆ 8.30 ಯಾಗದ ಸಂಕಲ್ಪ, 10.30ಕ್ಕೆ ಯಾಗ ಪೂರ್ಣಾಹುತಿ ನೆರವೇರಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾಭೂಷಣ ಬಳಗದಿಂದ ಸಂಗೀತ

10ರಂದು ವೇಣುವಾದನ, ಗೀತಾರಾಧನೆ, ನೃತ್ಯವೈಭವ, 11ರಂದು ಡಾ.ವಿದ್ಯಾಭೂಷಣ ಹಾಗೂ ತಂಡದಿಂದ ಭಕ್ತಿ ಸಂಗೀತ, ಭಜನೆ, ಸಂಜೆ ಶಾಂಭವಿ ವಿಜಯ ಯಕ್ಷಗಾನ ನಡೆಯಲಿದೆ.