ವಿಜಯಪುರದ ರಾಜ್ಯ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತ ಚಿಂತನಾ ಗೋಷ್ಠಿಯನ್ನು ಶಂಕರಗೌಡ ಸೋಮನಾಳ ಉದ್ಘಾಟಿಸಿದರು. ಹಾಸಿಂಪೀರ ವಾಲಿಕಾರ, ಶಿಲ್ಪಾ ಭಸ್ಮೆ, ಡಾ. ಮಾಧವ ಗುಡಿ ಮತ್ತಿತರರಿದ್ದಾರೆ. 
ಜಿಲ್ಲೆ

ವೈಚಾರಿಕ ಚಿಂತಕರಾಗಿ ಹೊರಹೊಮ್ಮಿದ ಶರಣರು

ಗಿರೀಶ ಸಗರ

ವಿಜಯಪುರ: ಬಸವಣ್ಣ ಹಾಗೂ ಅಕ್ಕಮಹಾದೇವಿ 12ನೇ ಶತಮಾನದ ಶ್ರೇಷ್ಠ ವಚನಕಾರರಾಗಿ ಸಮಾಜದ ಮೌಢ್ಯಗಳನ್ನು ಕಿತ್ತೊಗೆದು ವೈಚಾರಿಕ ಚಿಂತಕರಾಗಿ ಹೊರಹೊಮ್ಮಿದ್ದಾರೆ ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.

ನಗರ ಹೊರವಲಯದ ಮಹಿಳಾ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶಿಣ ಅಧ್ಯಯನ ವಿಭಾಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಸಹಯೋಗದಲ್ಲಿ ಬಸವ ಜಯಂತಿ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತ ಚಿಂತನಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ವಚನಕಾರರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡೋಣ. ವಚನಕಾರರ ಜೀವನದ ಯಶೋಗಾಥೆ ಕುರಿತು ಪ್ರಶ್ನೆಗಳನ್ನು ಕೇಳಿದರಲ್ಲದೆ, ವಿಜೇತರಿಗೆ ಬಹುಮಾನ ವಿತರಿಸಿದರು.

ಶಿಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ವಿಷ್ಣು ಶಿಂಧೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ನೈತಿಕ ತಳಹದಿ ಮೇಲೆ ಆದರ್ಶ ಸಮಾಜ ನಿರ್ಮಿಸಿದ ವಚನಕಾರರ ಸಂದೇಶ ನಮ್ಮ ಜೀವನಕ್ಕೆ ಒಂದು ದಿವ್ಯ ಔಷಧ ಎಂದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಉಪನ್ಯಾಸ ನೀಡಿ, ಬಸವಣ್ಣನವರು ಸಿ ಸಮಾನತೆ, ಕಾಯಕ, ದಾಸೋಹ ಮತ್ತು ಶ್ರಮ ಸಿದ್ಧಾಂತದ ಮೂಲಕ ವಿಶ್ವ ಸಂವಿಧಾನಕ್ಕೆ ನೀಡಿದ ಜೀವನದ ಮೌಲ್ಯಗಳ ಕುರಿತು ವಿವರಿಸಿದರು.

ಕಸಾಪ ತಾಲೂಕು ಗೌರವ ಸಲಹೆಗಾರ್ತಿ ಸಾಹಿತಿ ಶಿಲ್ಪಾ ಭಸ್ಮೆ ಉಪನ್ಯಾಸ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಬಸವ ಅಧ್ಯಯನ ಪೀಠದ ಸಂಯೋಜಕ ಡಾ. ರಾಜಕುಮಾರ ಮಾಲಿಪಾಟೀಲ ಹಾಗೂ ಸಾಹಿತಿ ಶೋಭಾ ಬಡಿಗೇರ ಇದ್ದರು.

ನೇತ್ರಾ ಸ್ವಾಗತಿಸಿದರು. ಲಕ್ಷಿ$್ಮ ಪಾಟೀಲ ಪರಿಚಯಿಸಿದರು. ಮುತ್ತಮ್ಮ ನಿರೂಪಿಸಿದರು. ಶೋಭಾ ವಂದಿಸಿದರು.