ಜಿಲ್ಲೆ

ಶರಣರ ಚರಿತ್ರೆಯು ಅಮೃತದಂತೆ: ಮಾಧುರಿ

Gadag - Shivanand Hiremath

ಶರಣರ ಚರಿತ್ರೆಯು ಅಮೃತದಂತೆ. ವಚನಗಳು ಬದುಕಿಗೆ ಆಸರ. ಮಕ್ಕಳು ವಚನಾಮೃತವನ್ನು ಸವಿದು ಅರ್ಥೈಸಿಕೊಂಡು ಬದುಕಿನಲ್ಲಿ ಮುನ್ನಡೆಯಬೇಕೆಂದು ಚಿಂತಕಿ ಮಾಧುರಿ ಮಾಳೆಕೊಪ್ಪ ಹೇಳಿದರು.
ಅವರು ಶನಿವಾರ ಗದುಗಿನ ವಿವೇಕಾನಂದ ನಗರದ ಸರ್ಕಾರಿ ಶಾಲೆ ನಂ.೧೬ ರಲ್ಲಿ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ನಡೆದ ಅಮೃತ ಬೋಜನ- ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳು ಎಲ್ಲ ಶರಣ-ಶರಣೆಯರ ವಿಚಾರ ಧಾರೆಯ ವಚನಾಮೃತವನ್ನು ಓದಿ ತಿಳಿದುಕೊಳ್ಳಬೇಕು. ಓದು ಬರಹವನ್ನು ನಿಷ್ಠೆಯಿಂದ ಮಾಡಿ ಪ್ರಗತಿಯನ್ನು ಹೊಂದಬೇಕೆದರು

ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿ ಮಾತನಾಡಿದ ಚಿಂತಕಿ ಶಶಿಕಲಾ ಮಾಲಿಪಾಟೀಲ, ಶ್ರಾವಣ ಮಾಸದಾದ್ಯಂತ ಶಾಲಾ-ಕಾಲೇಜುಗಳಲ್ಲಿ ವಚನ ಚಿಂತನೆ ಏರ್ಪಡಿಸಿ ಸಿಹಿ ಭೋಜನದೊಂದಿಗೆ ಕಲಿಕಾ ಸಾಮಗ್ರಿಗಳನ್ನು ಮಕ್ಕಳಿಗೆ ಉಪಯುಕ್ತವಾದ ಪುಸ್ತಕಗಳನ್ನು ಹಂಚುವ ಕಾರ್ಯ ವೇದಿಕೆಯಿಂದ ಜರಗುತ್ತಿದ್ದು ಮಕ್ಕಳು ಪುಸ್ತಕಗಳನ್ನು ಓದಿ ಅರ್ಥೈಸಿಕೊಳ್ಳಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಎಸ್.ವಿ.ಕುಲಕರ್ಣಿ ಅಮೃತ ಭೋಜನ ಜ್ಞಾನ ಸಿಂಚನ ಅತ್ಯಂತ ಉಪಯುಕ್ತ ಕಾರ್ಯಕ್ರಮವಾಗಿದ್ದು ಮಕ್ಕಳಿಗೆ ಇದರಿಂದ ಸಹಾಯವಾಗಲಿದೆ ಎಂದರು.
ಪ್ರಾರಭದಲ್ಲಿ ಅನಿತಾ ಪ್ರಾರ್ಥಿಸಿದರು. ಎಂ.ಆರ್. ನೀಲಣ್ಣವರ ಸ್ವಾಗತಿಸಿ ನಿರೂಪಿಸಿದರು. ಕೊನೆಯಲ್ಲಿ ಪಿ.ಎ. ನಮಾಜಿ ವಂದಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಎಸ್.ಬಿ.ಮುಳ್ಳಾಳ, ಪರ್ವಿನ್ ಜೋಫದಾರ, ರತ್ನಾ ಕನ್ಯಾಳ, ರೇಣುಕಾ ಸೋಮಣ್ಣವರ, ಶಾಹೇರಾ ಶಹಪೂರ, ಜಾಹೀದಾ ತಹಶೀಲ್ದಾರ, ಗಿರಿಜಾ ಹೊಂಬಳ, ಶೋಭಾ ಕಲ್ಮನಿ, ಗಾಯತ್ರಿ ಮಡಿವಾಳರ, ಜಾಕೀರಾ ಕೊಪ್ಪಳ ಮುಂತಾದವರಿದ್ದರು.