ಮಹಾಲಿಂಗಪುರದ ದೋಬಿ ಘಾಟದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ ಉದ್ಘಾಟಿಸಿದರು. ಜುಂಜರವಾಡದ ಬಸವರಾಜೇಂದ್ರ ಶರಣರು, ರಮೇಶ ಮಡಿವಾಳ ಇತರರಿದ್ದರು. 
ಜಿಲ್ಲೆ

ಶರಣರ ವಚನ ಸಾಹಿತ್ಯ ರಕ್ಷಿಸಿದ ಸಾಹಸಿ


ಮಹಾಲಿಂಗಪುರ: ಶರಣರು ರಚಿಸಿದ ವಚನ ಸಾಹಿತ್ಯವನ್ನು ರಕ್ಷಿಸಿದ ಸಾಹಸಿ ಮಡಿವಾಳ ಮಾಚಿದೇವ ಎಂದು ಕಸಾಪ ವಲಯ ಘಟಕದ ಅಧ್ಯಕ್ಷ ಬಸವರಾಜ ಮೇಟಿ ಹೇಳಿದರು.

ಸ್ಥಳೀಯ ದೋಬಿ ಘಾಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಚಿದೇವ ಅವರು ಮಲ್ಲಿಕಾರ್ಜುನಯ್ಯ ಸ್ವಾಮಿಗಳ ಶಿಷ್ಯನಾಗಿ ಅಪಾರ ಜ್ಞಾನ ಮತ್ತು ಶಿಕ್ಷಣ ಪಡೆದುಕೊಂಡಿದ್ದರು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು, ಅರಸ ಮೇಲಲ್ಲ ಅಗಸ ಕೀಳಲ್ಲ ಎನ್ನುವ ಸಮದೃಷ್ಟಿ ಹೊಂದಿದ್ದರು ಎಂದರು.

ಜುಂಜರವಾಡದ ಬಸವರಾಜೇಂದ್ರ ಶರಣರು ಮಾತನಾಡಿದರು.

ದೋಬಿ ಘಾಟ ಎದುರಗಡೆಯ ಕೂಡು ರಸ್ತೆಯಲ್ಲಿ ಶ್ರೀ ಗುರು ಮಡಿವಾಳ ಮಾಚಿದೇವರ ವೃತ್ತ ಉದ್ಘಾಟಿಸಲಾಯಿತು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ಹಿರಿಯ ರಮೇಶ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ರಾಜು ಚಮಕೇರಿ, ರವಿ ಜವಳಗಿ, ಮುಖಂಡರಾದ ಸುನೀಲಗೌಡ ಪಾಟೀಲ, ಸಂಗಮೇಶ ಮಡಿವಾಳ, ಮುತ್ತಪ್ಪ ಮಡಿವಾಳ, ಅರ್ಜುನ ಮಡಿವಾಳ, ಶಿವನಗೌಡ ಪಾಟೀಲ, ಶಂಕರಗೌಡ ಪಾಟೀಲ, ರವಿಗೌಡ ಪಾಟೀಲ, ವಿಜಯಕುಮಾರ ಕುಳಲಿ, ಬಸವರಾಜ ಮಡಿವಾಳ, ಮಹಾಂತೇಶ ಮಡಿವಾಳ, ಗೋಪಿ ಮಡಿವಾಳ, ಬನಪ್ಪ ಮಡಿವಾಳ, ಪಾಂಡಪ್ಪ ಮಡಿವಾಳ, ಕಲ್ಲಪ್ಪ ಚಿಂಚಲಿ, ಮುತ್ತಪ್ಪ ದಲಾಲ, ಆರ್. ಎಸ್. ಪರೀಟ್, ವಿಜೂಗೌಡ ಪಾಟೀಲ, ಚಂದ್ರಶೇಖರ ಕಾಗಿ ಇತರರಿದ್ದರು.

ಈರಣ್ಣ ಶಿರೋಳ ನಿರೂಪಿಸಿದರು. ಸಂಗಪ್ಪ ಮಡಿವಾಳ ಸ್ವಾಗತಿಸಿ, ವಂದಿಸಿದರು.