ಗದಗ ನಗರದ ಶಹಪೂರಪೇಟೆಯ ನೌಕರ ಭವನದಲ್ಲಿ ಇತ್ತೀಚೆಗೆ ಜರುಗಿದ ಪ್ರೊಬಸ್​ ಕ್ಲಬ್​ ಎರಡನೇ ಮಾಸಿಕ ಸಮಾರಂಭದಲ್ಲಿ ಸಿದ್ಧಲಿಂಗೇಶ ಸಜ್ಜನಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಗಣಪ್ಪನವರ, ಗಂಗಾಧರ ಕೋಟಿ, ಪ್ರೊ. ಕೆ.ಎಚ್​. ಬೇಲೂರ ರತ್ನಾ ಘಾಗಿರ್, ರಾಜಶೇಖರ ಕರಡಿ, ಸುರೇಖಾ ಪಿಳ್ಳೆ, ಪ್ರೊ. ಎಂ. ಸಿ. ವಗ್ಗಿ, ವಿ.ಎಚ್​. ಪಾಟೀಲ ಹಲವರು ಇದ್ದರು. 
ಜಿಲ್ಲೆ

ಮೌಲ್ಯಯುತ ಬದುಕಿಗೆ ಶರಣರ ವಚನ ಪಾಲಿಸಿ: ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಶರಣರ ಎರಡೇ ಎರಡು ವಚನಗಳನ್ನು ಪಾಲಿಸಿದರೆ ಸಾಕು ಮೌಲ್ಯಯುತ, ಪ್ರಾಮಾಣಿಕ, ಆದರ್ಶ, ನೆಮ್ಮದಿಯ ಬದುಕು ಅನುಭವಿಸಲು ಸಾಧ್ಯ ಎಂದು ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ ಹೇಳಿದರು.
ನಗರದ ಶಹಪೂರಪೇಟೆಯ ನೌಕರ ಭವನದಲ್ಲಿ ಇತ್ತೀಚೆಗೆ ಜರುಗಿದ ಪ್ರೊಬಸ್​ ಕ್ಲಬ್​ ಎರಡನೇ ಮಾಸಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಚನಗಳ ಸೂತ್ರಗಳು ನಮ್ಮ ಸಂವಿಧಾನವನ್ನು ಪ್ರತಿನಿಧಿಸುವ ಪಾಲಿರ್ಮೆಂಟ್​ ಆಗಿತ್ತು. ಹೇಗೋ ಬದುಕುವ ಬದಲಾಗಿದೆ ಮೌಲ್ಯಗಳ ರೂಢಿಸಿಕೊಂಡು ಬದುಕಲು ವಚನಗಳು ಮಾರ್ಗದರ್ಶನ ಮಾಡುತ್ತವೆ ಎಂದು ಜೀವನದ ಮೌಲ್ಯಗಳ ಕುರಿತಾಗಿ ಉಪನ್ಯಾಸ ನೀಡಿದರು.
ಸಾಕ್ಷ$್ಯ ಚಿತ್ರ ನಿರೂಪಕ, ಸಾಹಿತಿ ಬಸವರಾಜ ಗಣಪ್ಪನವರ ಮಾತನಾಡಿ, 1905 ಆಗಸ್ಟ್​ 7 ರಂದು ಬಂಗಾಳದಲ್ಲಿ ಬ್ರೀಟಿಷರ ವಿರುದ್ಧ ನಡೆದ ಸ್ವದೇಸಿ ಚಳುವಳಿಯ ಸವಿನೆನಪಿಗಾಗಿ 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚನೈನಲ್ಲಿ ಮೊದಲ ಕೈಮಗ್ಗ ದಿನವನ್ನು ಉದ್ಘಾಟಿಸಿದರು. ದೇಶಾದ್ಯಂತ ಕೈಮಗ್ಗ ದಿನಾಚರಣೆನ್ನು ಆಚರಿಸಿದ ಸಂದರ್ಭಧಲ್ಲಿ ಸಾಕ್ಷ$್ಯ ಚಿತ್ರವನ್ನು ಇಲ್ಲಿ ಪ್ರದಶಿರ್ಸಿರುವದು ಔಚಿತ್ಯರ್ಪೂಣವಾಗಿದೆ ಎಂದರು.
ಬಸವರಾಜ ತೋಟಿಗೇರ ಮಾತನಾಡಿದರು. ಗಂಗಾಧರ ಕೋಟಿ, ಪ್ರೊ. ಕೆ.ಎಚ್​. ಬೇಲೂರ ರತ್ನಾ ಘಾಗಿರ್, ರಾಜಶೇಖರ ಕರಡಿ, ಸುರೇಖಾ ಪಿಳ್ಳೆ, ಪ್ರೊ. ಎಂ. ಸಿ. ವಗ್ಗಿ, ವಿ.ಎಚ್​. ಪಾಟೀಲ, ಎ. ಎನ್​. ನದಾ್​. ಬಿ. ಎಲ್​. ಹೊಸಳ್ಳಿಮಠ, ಬಸವರಾಜ ಚಿತ್ತರಗಿ, ಎಸ್​.ಎಸ್​. ಹಿರೇಮಠ, ಪಿ.ಟಿ. ನಾರಾಯಣಪೂರ, ವಿ.ವಿ. ಕೊಟಗಿ ಇತರರು ಇದ್ದರು.