ಗುಡಗೇರಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನ. 
ಜಿಲ್ಲೆ

ಶರಣಬಸವೇಶ್ವರ ರಥೋತ್ಸವ ಇಂದು

ಅಳವಂಡಿ: ಸಮೀಪದ ಗುಡಗೇರಿ ಗ್ರಾಮದಲ್ಲಿ ಶ್ರೀ ಶರಣ ಬಸವೇಶ್ವರ 124ನೇ ವರ್ಷದ ಪುರಾಣ ಮಂಗಲ ಹಾಗೂ ರಥೋತ್ಸವ ಕಾರ್ಯಕ್ರಮ ಆ.24ರಿಂದ ಎರಡು ದಿನ ಅದ್ದೂರಿಯಾಗಿ ನಡೆಯಲಿದೆ.

ಆ.24ರ ಬೆಳಗ್ಗೆ ಶರಣಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಲಿದೆ. ನಂತರ ಜನಪದ ವಾದ್ಯಮೇಳದೊಂದಿಗೆ ಮಹಿಳೆಯರ ಕುಂಭ ಮೆರವಣಿಗೆ, ಅನ್ನಸಂತರ್ಪಣೆ, ರಥೋತ್ಸವ ಜರುಗಲಿದೆ. ಕಲಕೇರಿ-ವಿರುಪಾಪುರದ ಶ್ರೀ ಮುದುಕೇಶ್ವರ ಶಿವಾಚಾರ್ಯರು ಕುಂಭ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮುಂಡರಗಿಯ ನಾಡೋಜ ಡಾ.ಅನ್ನದಾನೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಆ.25ರ ಬೆಳಗ್ಗೆ ಗ್ರಾಮದ ಹಿರೇಮಠಾಧೀಶ್ವರರಿಂದ ಶ್ರೀ ಶರಣಬಸವೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ ನಡೆಯಲಿದೆ. ಸಲಕ ವಾದ್ಯಮೇಳ, ಮಹಿಳೆಯರ ಕಳಸದೊಂದಿಗೆ ಶ್ರೀ ಶರಣಬಸವೇಶ್ವರ ಅಡ್ಡಪಲ್ಲಕ್ಕಿ ಮಹೋತ್ಸವ, ಪುರಾಣ ಮಂಗಲ ಜರುಗಲಿದೆ. ನಂತರ ಅನ್ನಸಂತರ್ಪಣೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಮೈನಳ್ಳಿ-ಬಿಕನಳ್ಳಿಯ ಶ್ರೀಸಿದ್ದೇಶ್ವರ ಶಿವಾಚಾರ್ಯರು, ಕಲಕೇರಿ- ವಿರುಪಾಪುರದ ಶ್ರೀ ಮುದುಕೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ. ದೊಡ್ಡಬಸಯ್ಯ ಶಾಸ್ತ್ರಿ ಹಿರೇಮಠ ಪ್ರವಚನ, ಬಸವರಾಜ ಅಡವಳ್ಳಿ ಸಂಗೀತ, ಹುಸೇನಸಾಬ ಮೂಲಿಮನಿ ತಬಲಾ ನಿರ್ವಹಿಸಲಿದ್ದಾರೆ. ಶ್ರೀ ಗುರು ಪುಟ್ಟರಾಜ ನಾಟ್ಯ ಸಂಘದಿಂದ ‘ತ್ಯಾಗದ ತೊಟ್ಟಿಲು‘ ನಾಟಕ ಪ್ರದರ್ಶನಗೊಳ್ಳಲಿದೆ.