ಧಾರವಾಡ: ಶಾರದಾ ಗೋಕಾಕ ಅವರು ತಮ್ಮ ಕಾವ್ಯ ಗುರುವಾಗಿ ಹಾಗೂ ತಂದೆ ಎಂಬ ವಾತ್ಸಲ್ಯದ ಸಂಬಂಧವನ್ನು ಬೇಂದ್ರೆ ಎಂಬ ಮಾಂತ್ರಿಕನ ಜತೆಗೆ ಹೊಂದಿದ್ದರು ಎಂದು ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯ ಚೆನ್ನಪ್ಪ ಅಂಗಡಿ ಹೇಳಿದರು.
ನಗರದ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಶಾರದಾ ಗೋಕಾಲ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಡಾ. ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಮೇಘಾ ಹುಕ್ಕೇರಿ, ವಿದ್ಯಾ ಶಿರಹಟ್ಟಿ, ವಿಶ್ವೇಶ್ವರಿ ಹಿರೇಮಠ, ಮಾಲತಿ ಮುದಕವಿ, ಸರೋಜಾ ರಾವ್, ಶೈಲ ಛಬ್ಬಿ, ಸೀತಾ ಛಪ್ಪರ್, ಪದ್ಮ ಉಮರ್ಜಿ, ಸರೋಜಾ ಲೋಡೈ, ಶಾಲಿನಿ ರುದ್ರಮುನಿ, ಅಂಜು ಇಟ್ನಾಳ, ಇತರರು ಇದ್ದರು.
ಡಾ. ಉಷಾ ಗದ್ದಗಿಮಠ ಸ್ವಾಗತಿಸಿದರು. ಸುನೀತಾ ಮೂರಶಿಳ್ಳಿ ನಿರೂಪಿಸಿದರು. ಡಾ. ಪ್ರಜ್ಞಾ ಮತ್ತಿಹಳ್ಳಿ ವಂದಿಸಿದರು.