ಮಂಜೇಶ್ವರ: ಕೃಷ್ಣ ಜಿ. ಮಂಜೇಶ್ವರ ಸಾರಥ್ಯದ ನಾಟಕ ತಂಡ ಮಂಜೇಶ್ವರ ಶಾರದಾ ಆರ್ಟ್ಸ್ ಕಲಾವಿದರು ಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮ ಜನವರಿ 17, 18, 19ರಂದು ಉದ್ಯಾವರ ವಾಡದ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ವಠಾರದಲ್ಲಿ ಜರಗಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಸಂಜೆ ವಾಡ ಪರಿಸರದಲ್ಲಿ ಬಿಡುಗಡೆ ವಾಡಲಾಯಿತು.
ಕಣಿಯೂರು ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಪುತ್ತೂರು ಅಕ್ಷಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಯಂತ ನಡುಬೈಲು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಶುಭಹಾರೈಸಿದರು. ಬೆಳ್ಳಿಹಬ್ಬ ಸಂಭ್ರಮ ಸಮಿತಿ ಅಧ್ಯಕ್ಷ ಸಂಪತ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿಷಿ ಅನಿಲ್ ಪಂಡಿತ್, ಕೃಷ್ಣ ಭಟ್, ಉದ್ಯಾವರ ವಾಡದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ ಶುಭ ಹಾರೈಸಿದರು.
ಬೀರು ಚೌಟ, ತಿಮಿರಿ ಬೆಳ್ಚಪ್ಪಾಡ, ಮುಂಡತ್ತಾಯ ಬೆರ್ಲಚಪ್ಪಾಡರು, ಪದ್ಮ ಗುರಿಕಾರರು, ವಾಡದ ಅಧ್ಯಕ್ಷ ಕಿರಣ್ ಶೆಟ್ಟಿ ವಾಡ, ಉದ್ಯಮಿಗಳಾದ ಮೋಹನ್ ಶೆಟ್ಟಿ ತೂಮಿನಾಡು ಹಾಗೂ ನರಸಿಂಹ ಕುಲಾಲ್ ಮತ್ತಿತರರಿದ್ದರು. ರಾಜೇಶ್ ಮುಗುಳಿ ಸ್ವಾಗತಿಸಿದರು. ದಿನಕರ್ ಹೊಸಂಗಡಿ ನಿರೂಪಿಸಿದರು. ಹರೀಶ್ ವಾಡ ವಂದಿಸಿದರು.