ಜಿಲ್ಲೆ

ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

Dharwada - Basavaraj Idli

ಹುಬ್ಬಳ್ಳಿ: ನಗರದ ಎಸ್ ಜೆಆರ್ ವಿಪಿ ಮಂಡಳದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.

ವಿದ್ಯಾದೇವತೆ ಸರಸ್ವತಿ ಮಾತೆಗೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.
ವಿದ್ಯಾಥಿರ್ಗಳು ಮೇಣದ ಬತ್ತಿಯನ್ನು ಬೆಳಗಿಸುವುದರ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು. ಹೆಡ್ ಬಾಯ್ ರಾಜೀವ ಅಣವೇಕರ ಮುಂಬರುವ ವಷದ ವಿದ್ಯಾರ್ಥಿಗೆ ಧ್ವಜ ಹಸ್ತಾಂತರಿಸಿದರು.

ಅತಿಥಿಗಳಾಗಿದ್ದ ರೋಟರಿ ಕ್ಲಬ್ ಮಿಡ್ಟೌನ್ ಮಾಜಿ ಅಧ್ಯಕ್ಷ ಕೌಸ್ತುಭ ಸಂಶಿಕರ ಮಾತನಾಡಿ, ವಿದ್ಯಾಥಿರ್ಗಳು ಜೀವನದಲ್ಲಿ ಆತ್ಮವಿಶ್ವಾಸ, ನಂಬಿಕೆ, ಆದರ್ಶ, ಸಹಾಯ ಮಾಡುವ ಮನೋಭಾವ, ಛಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಲೆಯ ಅಧ್ಯಕ್ಷ ಭವರಲಾಲ್ ಸಿ. ಜೈನ್ ಮಾತನಾಡಿ, ವಿದ್ಯಾಥಿರ್ಗಳು ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಭವಿಷ್ಯದ ಜೀವನ ರೂಪಿಸಿಕೊಳ್ಳಬೇಕು. ಪ್ರಾಮಾಣಿಕತೆ, ಶಿಸ್ತು, ಸಮಯಪ್ರಜ್ಞೆಯಿಂದ ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳತಿಗೆ ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.

ಪ್ರಾಚಾರ್ಯ ಡಾ. ಕ್ಯಾಥರೀನ್ ದಿನೇಶ್ ಮಾತನಾಡಿ, ಅವಕಾಶಗಳಿಂದ ತುಂಬಿರುವ ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ಜೀವನದಲ್ಲಿ ಭಾಷಾ ಕೌಶಲಗಳನ್ನು ಬೆಳೆಸಿಕೊಂಡು ಸಮರ್ಥವಾಗಿ ಯಶಸ್ಸು ಸಾಧಿಸಿ ಎಂದು ಹೇಳಿದರು.

ರೋಟರಿ ಕ್ಲಬ್ ಮಿಡ್ಟೌನ್ ಅಧ್ಯಕ್ಷ ರಾಜು ದೊಡ್ಡಮನಿ, ಕ್ಲಬ್ ಕೋಶಾಧ್ಯಕ್ಷ ಪ್ರವಿಣ ಭನ್ಸಾಲಿ, ಉಪಾಧ್ಯಕ್ಷ ಮಹೇಂದ್ರಕುಮಾರ ಪಾಲ್ಗೋತಾ, ಮಹಾವೀರ ಜೈನ್, ಪೂರಣಕುಮಾರ ನಹಾಟಾ ಇತರರು ಇದ್ದರು.