ಜಿಲ್ಲೆ

ಶಾಂತಿನಿಕೇತನ ವಿದ್ಯಾರ್ಥಿ ಪರಿಷತ್ ಉದ್ಘಾಟನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಘಂಟಿಕೇರಿಯ ಶಾಂತಿನಿಕೇತನ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಿಯೋ ಫೆಸ್ಟ್ 2024 ಕಾರ್ಯಕ್ರಮದಲ್ಲಿ ಶುಕ್ರವಾರ ಕೌನ್ಸಿಲ್ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಅತಿಥಿಯಾಗಿದ್ದ ಮಾಜಿ ಶಾಸಕ ಅಶೋಕ ಕಾಟವೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಪರಿಪೂರ್ಣತೆ ಹಾಗೂ ವಿಕಸನಕ್ಕೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ ಎಂದರು.

ಸಂಸ್ಥೆಯ ಅಧ್ಯಕ್ಷ ಭವರಲಾಲ್ ಸಿ. ಜೈನ್ ಮಾತನಾಡಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳ ಕೌನ್ಸಿಲ್ ಸದಸ್ಯರನ್ನು ಆಯ್ಕೆ ಮಾಡಿ ಬ್ಯಾಡ್ಜ್ ನೀಡಲಾಯಿತು. ಮಿಸ್ಟರ್ ಪ್ರೆಶರ್ ಸಂದೀಪ ವರ್ಧಾ ಹಾಗೂ ಮಿಸ್ ಪ್ರೆಶರ್ ಸರ್ವತ್ ಕಚ್ಚಿ, ಪ್ರಧಾನ ಕಾರ್ಯದರ್ಶಿ ಅಮಿನಾ ಲಕ್ಕುಂಡಿ, ಉಪಪ್ರಧಾನ ಕಾರ್ಯದರ್ಶಿಯಾಗಿ ಸಾರ್ಥಕ ಕದಮ್ ಅವರು ಆಯ್ಕೆಯಾದರು.

ಸಂಸ್ಥೆಯ ಕಾರ್ಯದರ್ಶಿ ಭರತ್ ಭಂಡಾರಿ, ಉಪಾಧ್ಯಕ್ಷ ಮಹೇಂದ್ರಕುಮಾರ ಪಾಲ್ಗೋಥಾ, ಪ್ರಾಚಾರ್ಯ ವೆಂಕಣ್ಣ ಹುಗ್ಗಿ, ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಮುಖ್ಯಾಧ್ಯಾಪಕಿ ಡಾ. ಕ್ಯಾತರೀನ್ ದಿನೇಶ, ಹಿಂದಿ ಮಾಧ್ಯಮ ಶಾಲೆ ಮುಖ್ಯಾಧ್ಯಾಪಕ ವಿಲಾಸ ಪುದಾಲೆ, ಬಸವರಾಜ ಶೆಟ್ಟರ್, ನ್ಯಾನ್ಸಿ ಪಿ. ಉಪನ್ಯಾಸಕರು ಇದ್ದರು. ಅಮೀನಾ ವಂದಿಸಿದರು.