ಹುಬ್ಬಳ್ಳಿ: ಇಲ್ಲಿಯ ಶಾಂತಿನಿಕೇತನ ಪಿಯು ಮತ್ತು ಬಿಕಾಂ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಬುಧವಾರ ನಡೆಯಿತು.
ಪ್ರಥಮ ಪಿಯು ಹಾಗೂ ಬಿಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿ ಪರಿಷತ್ ರಚನೆ ಮಾಡಲಾಯಿತು.
ಅತಿಥಿಯಾಗಿದ್ದ ಧಾರವಾಡ ಕರ್ನಾಟಕ ಸೈನ್ಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಸಿ.ಎಂ. ಮೂಲಿಮನಿ, ವಿದ್ಯಾರ್ಥಿಗಳು ಉತ್ತಮ ನಡವಳಿಕೆ ಅಳವಡಿಸಿಕೊಳ್ಳಬೇಕು. ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು ಎಂದು ಹೇಳಿದರು.
ಕಾಲೇಜಿನ ಅಧ್ಯಕ್ಷ ಭವರಲಾಲ್ ಜೈನ್ ಮಾತನಾಡಿ, ಪಾಲಕರು ಮತ್ತು ಶಿಕ್ಷಕರನ್ನು ಮಕ್ಕಳು ಗೌರವಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯದರ್ಶಿ ಭರತ ಬಂಡಾರಿ, ಉಪಾಧ್ಯಕ್ಷ ಮಹೇಂದ್ರ ಪಾಲ್ಗೋತ, ನಿರ್ದೇಶಕ ಭರತ ಜೈನ್, ಶಾಂತಿನಿಕೇತನ ಪಿಯು ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವೆಂಕಣ್ಣ ಹುಗ್ಗಿ, ನ್ಯಾನ್ಸಿ, ಆಡಳಿತಾಧಿಕಾರಿ ಬಸವರಾಜ ಶೆಟ್ಟರ, ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಡಾ. ಕ್ಯಾಥರೀನ್ ದಿನೇಶ, ಶಾಂತಿನಾಥ ಹಿಂದಿ ಮಾಧ್ಯಮ ಶಾಲೆ ಪ್ರಾಂಶುಪಾಲ ವಿಲಾಸ್ ಪಿ. ಇತರರು ಪಾಲ್ಗೊಂಡಿದ್ದರು.