ವಿಜಯವಾಣಿ ಸುದ್ದಿಜಾಲ ಧಾರವಾಡ
ಷಡ್ಗ್ರಹ ಯೋಗ ಹಿನ್ನೆಲೆಯಲ್ಲಿ ಇಲ್ಲಿನ ಸಾಧನಕೇರಿ ಉಯನಗರದ ಶ್ರೀ ಗೋಪಾಲಾಚಾರ್ಯ ವೇದ ಸಂಸ್ಕೃತ ಪಾಠ ಶಾಲೆಯಲ್ಲಿ ಮಾ. 30ರಂದು ವಿವಿಧ ಶಾಂತಿ ಹೋಮಗಳನ್ನು ಆಯೋಜಿಸಲಾಗಿದೆ.
ಷಡ್ಗ್ರಹ ಯೋಗದಿಂದ ಮೇಷ, ಮೀನ, ಕುಂಭ, ವೃಶ್ಚಿಕ, ಸಿಂಹ ರಾಶಿಯವರಿಗೆ ಅಶುಭ ಫಲವಿದೆ. ಇದರ ಪರಿಹಾರಕ್ಕಾಗಿ ಅಂದು ಬೆಳಗ್ಗೆ 6 ಗಂಟೆಯಿಂದ ಶ್ರೀ ಲಕ್ಷ್ಮೀ ನರಸಿಂಹ ಹೋಮ, ಶುಂ ಶುಮಾರ ಹೋಮ, ನವಗ್ರಹ ಹಾಗೂ ಮನ್ಯ ಸೂಕ್ತ ಹೋಮಗಳನ್ನು ಪಂ. ರಾಮಾಚಾರ್ ಅಧ್ಯಾಪಕ ನೇತೃತ್ವದಲ್ಲಿ ನೆರವೇರಿಸಲಾಗುವುದು. ಆಸಕ್ತರು ಮಾ. 29ರೊಳಗೆ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಪಾಠ ಶಾಲೆ ಸಂಪರ್ಕಿಸಬಹುದು ಎಂದು ಎಸ್.ಎಚ್.ಕಾಂತನವರ ತಿಳಿಸಿದ್ದಾರೆ.