ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರ ಧಾರ್ಮಿಕ ಸಭೆಯಲ್ಲಿ ಡಾ.ವಿಜಯ ಸರಸ್ವತಿ ಮಾತನಾಡಿದರು. ದೇವಳದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ ಇದ್ದರು. 
ಜಿಲ್ಲೆ

ನಿರ್ಮಲ ಮನಸ್ಸಿದ್ದಲ್ಲಿ ದೇವರ ಸಾನ್ನಿಧ್ಯ

ಸೌಮ್ಯ ಆರ್

ಉಪ್ಪಿನಂಗಡಿ: ನಿರ್ಮಲ ಮನಸ್ಸಿನ ಶರಣಾಗತಿ ಇರುವಲ್ಲಿ ಅಹಂಕಾರ ಇರುವುದಿಲ್ಲ. ಅಹಂಕಾರವಿಲ್ಲದಲ್ಲಿ ದೇವರ ಸಾನ್ನಿಧ್ಯವಿರುತ್ತದೆ ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಹೇಳಿದರು.

34 ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.

ಧರ್ಮ ಜಾಗೃತಿ ಆಗುವುದೇ ಪರಿವರ್ತನೆ ಆಗಿದೆ. ಪರಿವರ್ತನೆ ಆಗುವುದೇ ಸಾರ್ಥಕ್ಯವಾಗಿದೆ. ಶಾಂತಿನಗರ ಮಹಾವಿಷ್ಣು ದೇವಸ್ಥಾನ ಹಲವು ರೀತಿಯಲ್ಲಿ ನಾಡಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಧಾರ್ಮಿಕ ಚಿಂತನೆಗಳು, ಆಲೋಚನೆಗಳು ನಮ್ಮನ್ನು ಶ್ರೇಷ್ಠವನ್ನಾಗಿಸುತ್ತದೆ ಎಂದರು.
ದೇವಳದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಆಡಳಿತ ಮೊಕ್ತೇಸರ ಯು.ಜಿ.ರಾಧ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ತೇಜಸ್ವಿನಿ ಕುಕ್ಕಿಲ ಪ್ರಾರ್ಥಿಸಿ, ಶೇಖರ ಪೂಜಾರಿ ಜೇಡರಪಾಲು ವಂದಿಸಿದರು. ಸಂತೋಷ್ ಕುಮಾರ್ ಶಾಂತಿನಗರ ನಿರೂಪಿಸಿದರು.
ನಂತರ ಜಿಲ್ಲೆ ಸುಪ್ರಸಿದ್ಧ ಆಯ್ದ ಕಲಾವಿದರ ಕೂಡುವಿಕೆಯಲ್ಲಿ ಸತೀಶ್ ಆಚಾರ್ಯ ಮಾಣಿ ಸಂಯೋಜನೆಯೊಂದಿಗೆ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ಬಯಲಾಟ ನಡೆಯಿತು.