ಜಿಲ್ಲೆ

ಶಾಂತಪ್ಪಣ್ಣ ಮಿರಜಿ ಬ್ಯಾಂಕ್​ಗೆ 4.37 ಕೋಟಿ ರೂ. ಫಾಯಿದೆ

ಚಿಕ್ಕೋಡಿ: ಶಾಂತಪ್ಪಣ್ಣಾ ಮಿರಜಿ ಅರ್ಬನ್​ ಕೋ&ಆ್​ ಬ್ಯಾಂಕ್​ ಆರ್ಥಿಕ ವರ್ಷದಲ್ಲಿ 2.26 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯ ಮಹಾಂತೇಶ ಭಾತೆ ಹೇಳಿದರು.

ಪಟ್ಟಣದ ಸಹಕಾರಿ ಸಭಾಗಹದಲ್ಲಿ ಸೋಮ-ವಾ-ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕ್​ ಬೆಳಗಾವಿಯಾದ್ಯಂತ 14 ಶಾಖೆ ಹೊಂದಿದ್ದು, ಲಾಭದಲ್ಲಿವೆ. 13,137 ಸದಸ್ಯರು, 9.62 ಕೋಟಿ ರೂ. ಷೇರು ಬಂಡವಾಳ, 52 ಕೋಟಿ ರೂ. ಸ್ವಂತ ನಿಧಿಯಿದೆ. 258.69 ಕೋಟಿ ರೂ. ಠೇವು ಸಂಗ್ರಹಿಸಿ 171.10 ಕೋಟಿ ರೂ. ಸಾಲ ವಿತರಿಸಿದೆ. ಸಾಲ ವಸೂಲಾತಿ ಪ್ರಮಾಣ ಶೇ.96.10. ಒಟ್ಟು ಗುಂತಾವಣೆ 124.39 ಕೋಟಿ ರೂ. ಒಟ್ಟು ಲಾಭ 4.37 ಕೋಟಿ ರೂ., ನಿವ್ವಳ ಲಾಭ 2.26 ಕೋಟಿ ರೂ.. ದುಡಿಯುವ ಬಂಡವಾಳ 315.93 ಕೋಟಿ ರೂ. ಇದೆ ಎಂದರು.

ಹೊಸ ವಾಹನಕೊಳ್ಳಲು, ಕೆಗಾರಿಕೆಗಳು, ಉದ್ಯಮಗಳು, ವತ್ತಿನಿರತರಿಗೆ ಹಾಗೂ ಮನೆ ಕಟ್ಟಲು ಮತ್ತು ಖರೀದಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಡಿಜಿಟಲ್​ ಬ್ಯಾಂಕಿಂಗ್​ ಸೇವೆ ಜಾರಿಗೊಳಿಸುವ ಹಾಗೂ ಶಾಖೆಗಳ ವಿಸ್ತರಣೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಉಪಾಧ್ಯ ಅಮರನಾಥ ಬಸರಗಿ, ನಿರ್ದೇಶಕರಾದ ಸುರೇಶ ರಬುಡೆ, ಅನಿಲ ಸದಲಗೆ, ಯಶವಂತ ಮಿರಜಿ, ಈರಪ್ಪ ಹಂಪಣ್ಣವರ, ಸಂಜಯಕುಮಾರ ಪಾಟೀಲ, ಮಹಾವೀರ ಪಾಟೀಲ, ಮಾಲಾ ದೇಸಾಯಿ, ರವಿಕುಮಾರ ರೋಖಡೆ, ಅಶೋಕ ದಾನವಾಡೆ, ಮಹೇಶ ಲಡಗೆ, ಜಿತೇಂದ್ರ ಸಾಂಗಲೆ, ಮಹಾವೀರ ಮಿರಜಿ, ಪೂಜಾ ಪಟ್ಟಣಕುಡೆ, ರಮೇಶ ಧಾಮನ್ನವರ, ಅಜಿತ ಅಕ್ಕೋಳಿ, ಪ್ರಧಾನ ವ್ಯವಸ್ಥಾಪಕ ಆರ್​.ಎಸ್​. ವಂದೂರೆ, ಮಾಹಿತಿ ತಂತ್ರಜ್ಞಾನ ವ್ಯವಸ್ಥಾಪಕ ವಿ ಬಿ. ದೇಸಾಯಿ ಎನ್​.ಬಿ. ಕೋಟಗಿ ಉಪಸ್ಥಿತರಿದ್ದರು.