ರಾಯಚೂರು ಪಾರ್ಲಿಮೆಂಟ್‌ನ್ನು ಅಂಬಾನಿ, ಅದಾನಿಗಳು ನಿಯಂತ್ರಣದಲ್ಲಿಟ್ಟುಕೊAಡು ದೇಶವನ್ನು ಹತೋಟಿಯಲ್ಲಿಟ್ಟುಕೊಂಡಿದ್ದಾರೆ, ಶಾಂತರಸರ ಪ್ರತಿರೋಧ ಮನೋಭಾವ ಅಳವಡಿಸಿಕೊಂಡು ವಿರುದ್ಧ ಮೆಟ್ಟಿ ನಿಲ್ಲಬೇಕಾಗಿದೆ ಎಂದು ಹೋರಾಟಗಾರ ಸಿದ್ದನಗೌಡ ಪಾಟೀಲ್ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಸೋಮವಾರ ಸಂಸ ಸಂಸ್ಥೆಯಿAದ ಆಯೋಜನೆ ಮಾಡಲಾಗಿದ್ದ ಶಾಂತರಸರ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಇವತ್ತಿನ ದಿನಗಳು ಜಾಗತೀಕರಣದಲ್ಲಿ ಇವತ್ತು ನಾವು ಪ್ರಜೆಗಳಾಗಿ ಉಳಿದಿಲ್ಲ, ಗ್ರಾಹಕರಾಗಿದ್ದೇವೆ,
ಕೊಳ್ಳುವ ಶಕ್ತಿ ಇದ್ದರೆ ಮಾತ್ರ ಪ್ರಜೆ, ಕೊಳ್ಳುವ ಶಕ್ತಿ ಇರದೇ ಇದ್ದರೆ ಪ್ರಜೆಗಳಲ್ಲ. ಅಂತಹ ಸ್ಥಿತಿಯಲ್ಲಿ ನಾವಿದ್ದೇವೆ, ಸಾಕಷ್ಟು ಅಭಿವೃದ್ಧಿಯಾಗಿದೆ, ಆದರೆ ಅಭಿವೃದ್ಧಿಯಲ್ಲಿ ಮನುಷ್ಯನಿಲ್ಲದಂತಾಗಿದೆ ಎಂದರು.
ಹೈ-ಕ ಪ್ರದೇಶದಲ್ಲಿ ನಿಜಾಮರ ಆಳ್ವಿಕೆ ಸಂದರ್ಭದಲ್ಲಿ ದೌರ್ಜನ್ಯ, ದಬ್ಬಾಳಿಕೆ ಮಿತಿ ಮೀರಿದ್ದವು, ಆ ಕಾಲಘÀಟ್ಟದಲ್ಲಿ ಶಾಂತರಸರು ಎರಡು ಕತೆ ರಚಿಸಿದ್ದರು, ಆ ಕತೆಗಳು ಓದಿದರೆ ನಿಜಾಮರ ಆಳ್ವಿಕೆಯ ಸಂದರ್ಭದಲ್ಲಿ ನಮ್ಮ ತಾತ ಮುತ್ತಾತ ಹೇಗಿದ್ದು ಎಂದು ತಿಳಿಸಿಕೊಡುತ್ತದೆ,
೧೯೪೭ ಸ್ವಾತಂತ್ರ‍್ಯ ದೊರಕಿತ್ತು, ಆದರೆ ಈ ನೆಲಕ್ಕೆ ಸ್ವಾತಂತ್ರ‍್ಯ ದೊರಕಿರಲಿಲ್ಲ, ಒಂದು ವರ್ಷ ಕಾಯಬೇಕಾಯಿತು, ನಿಜಾಮರ ಆಳ್ವಿಕೆಗೆ ಕೈಯಲ್ಲಿ ಈ ಪ್ರದೇಶ ವಶದಲ್ಲಿತ್ತು, ನಿಜಾಮರ ದಾಳಿ, ದಬ್ಬಾಳಿಕೆ, ದೌರ್ಜನ್ಯಗಳ ಕಥೆಗಳಲ್ಲಿ ಅದ್ಭುತವಾಗಿ ಬರೆದಿದ್ದಾರೆ, ಇವತ್ತಿನ ಕಾಲಘಟ್ಟದಲ್ಲಿ ಶಾಂತರಸರ ಕತೆಗಳನ್ನು ಓದಲೇಬೇಕಾಗಿದೆ ಎಂದು ತಿಳಿಸಿದರು.
ಇವತ್ತು ನಾವು ಅತಂತ್ರರಾಗಿದ್ದೇವೆ, ಭೂ ಕಬಳಿಕೆದಾರರ ವಿರುದ್ಧ ಅನೇಕರು ಹೋರಾಟ ನಡೆಸುತ್ತಿದ್ದಾರೆ,ಆದರಿಂದ ಶಾAತರಸರ ಹೋರಾಟ ನಮಗೆ ಬೇಕಾಗಿದೆ, ನಗರ ವ್ಯಾಪಾರಿಕರಣ ಗ್ರಾಮಗಳಿಗೂ ವಿಸ್ತರಿಸಿದೆ, ವ್ಯಾಪಾರಿಕರಣವಾಗುತ್ತಿದೆ, ದೇಶದ ಪ್ರಜೆಗಳಾದ ನಾವುಗಳು ಶಾಂತರಸ ಹಾದಿಯನ್ನು ಅನುಸರಿಸಬೇಕಾಗಿದೆ, ದೌರ್ಜನ್ಯ, ದಬ್ಬಾಳಿಕೆ, ವಿರುದ್ಧ ಮೆಟ್ಟಿ ನಿಲ್ಲಬೇಕಾದ ಸ್ಥಿತಿ ಒದಗಿ ಬಂದಿದೆ ಎಂದರು.
ನAತರ ಆರ್.ಜಿ ಹಳ್ಳಿ ನಾಗರಾಜ ಅವರು, ಉಷಾ ಜ್ಯೋತಿಯವರ ಇರುವಿಕೆಯ ಹಾದಿಯಲ್ಲಿ ಗಜಲ್
ಪುಸ್ತಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಚಿಂತಕ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಽಕಾರದ ಸದಸ್ಯ ಭಗತರಾಜ ನಿಜಾಮಕಾರಿ, ರಾಮಣ್ಣ ಹವಳೆ, ಶಾಂತ ಕುಲಕರ್ಣಿ ಬಸವಪ್ರಭು ಸೇರಿದಂತೆ ಅನೇಕರು ಇದ್ದರು.