ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಂತಕವಿ ಸಕ್ಕರಿ ಬಾಳಾಚಾರ್ಯರು 50 ವರ್ಷಗಳ ಕಾಲ ಕನ್ನಡ ಕಟ್ಟುವಲ್ಲಿ ಪಟ್ಟ ಪ್ರಯತ್ನಗಳು ಭಗೀರಥ ಪ್ರಯತ್ನಗಳಾಗಿದ್ದವು ಎಂದು ವಿಶ್ರಾಂತ ಗ್ರಂಥಪಾಲಕ ಶಿವನಗೌಡ ಪಾಟೀಲ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶಾಂತಕವಿ ಹೆಸರಿನಲ್ಲಿ ಆರಂಭಿಸಿರುವ ಶಾಂತೇಶ ವಾಚನಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ "ಶಾಂತಕವಿಗಳ ಪರಿಚಯ ಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಕನ್ನಡದಲ್ಲಿ ನಾಟಕಗಳು, ಕೀರ್ತನಗಳಿಲ್ಲದ ಕಾಲದಲ್ಲಿ ಕನ್ನಡದಲ್ಲಿ ನಾಟಕಗಳನ್ನು, ಕೀರ್ತನೆಗಳನ್ನು ಬರೆದರು. ನಂತರ ಕರ್ನಾಟಕದ ತುಂಬ ರಂಗಪ್ರಯೋಗ ಮಾಡಿ ಕನ್ನಡಾಭಿಮಾನ ಮೂಡಿಸಿ, ಕನ್ನಡದ ಅಲೆಯನ್ನು ಸೃಷ್ಟಿಸಿದ ಕನ್ನಡದ ಕಟ್ಟಾಳು ಶಾಂತಕವಿ ಎಂದರು.
ಶಂಕರ ಕುಂಬಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಮಹೇಶ ಹೊರಕೇರಿ, ಶಿವಾನಂದ ಭಾವಿಕಟ್ಟಿ, ಎಸ್. ವಿ. ಅಯ್ಯನಗೌಡರ, ಹನುಮೇಶ ಸಕ್ರಿ, ಶ್ರೀಶೈಲ ಕಮತರ, ಪ್ರಭು ಹಂಚಿನಾಳ, ಗದಿಗೆಯ್ಯ ಹಿರೇಮಠ, ಎಸ್.ಎಂ. ರಾಚಯ್ಯನವರ, ಎಸ್.ಐ. ಭಾವಿಕಟ್ಟಿ, ಆರ್.ಬಿ. ಪಟ್ಟಣಶೆಟ್ಟಿ, ಅಭಿಷೇಕ ದೇಸಾಯಿ, ಇತರರು ಇದ್ದರು.