ಶಿಗ್ಗಾಂವಿ: ತಾಲೂಕಿನ ಕುಂದೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಷಣ್ಮುಖಗೌಡ ಪಾಟೀಲ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಮೀನಾಕ್ಷಿ ಗುಡ್ಡನಗೌಡ ಗಿರಿಯಪ್ಪಗೌಡ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯ ಷಣ್ಮುಖಗೌಡ ಪಾಟೀಲ ಇಬ್ಬರೇ ನಾಮಪತ್ರ ಸಲ್ಲಿಸಿದ್ದರು. 10 ಸದಸ್ಯರ ಬಲ ಹೊಂದಿದ್ದು, ಇಬ್ಬರು ಆಕಾಂಕ್ಷಿಗಳು ತಲಾ 5 ಮತಗಳನ್ನು ಪಡೆದಿದ್ದರು. ಆಗ ಚುನಾವಣಾಧಿಕಾರಿ ಸಾಳೋಂಕಿ ಅವರು ಎಲ್ಲರ ಒಪ್ಪಿಗೆ ಪಡೆದು ಲಾಟರಿ ಪ್ರಕ್ರಿಯೆ ನಡೆಸಿದರು.
ಈ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಷಣ್ಮುಖಗೌಡ ಪಾಟೀಲ ಆಯ್ಕೆಯಾಗಿದ್ದಾರೆ.