ಬಸವಕಲ್ಯಾಣದಿಂದ ಬೆಳಗಾವಿ ಕಡೆಗೆ ಹೊರಟಿದ್ದ ಬಸವ ಜ್ಯೋತಿಯನ್ನು ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಬರಮಾಡಿಕೊಂಡು ಪೂಜೆ ಸಲ್ಲಿಸಲಾಯಿತು. ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಶ್ರೀ ಸದ್ಗುರು ಬಸವಲಿಂಗ ಸ್ವಾಮೀಜಿ, ಮಹಾಂತೇಶ ಆದಿಗೊಂಡ, ಶ್ರೀಕಾಂತ ಕೊಟ್ರಶೆಟ್ಟಿ ಇತರರಿದ್ದರು. 
ಜಿಲ್ಲೆ

ಬಸವ ಪಂಚಮಿ ಆಚರಿಸಿ

ಬಸವನಬಾಗೇವಾಡಿ: ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಬಸವ ಧರ್ಮವು ವರ್ಗರಹಿತ, ಧರ್ಮ ಸಹಿತ, ಜಾತಿ, ಮತ, ಪಂಥಗಳ ಬೇಧವಿಲ್ಲದ ಒಂದು ವೈಶಿಷ್ಟೃಪೂರ್ಣವಾದ ವಿಶಿಷ್ಟ ಧರ್ಮವಾಗಿದೆ ಎಂದು ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.

ಬಸವಕಲ್ಯಾಣದಿಂದ ಬೆಳಗಾವಿ ಕಡೆಗೆ ಹೊರಟಿದ್ದ ಬಸವ ಜ್ಯೋತಿಯನ್ನು ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಬರಮಾಡಿಕೊಂಡು ಪೂಜೆ ಸಲ್ಲಿಸಿ, ಅವರು ಮಾತನಾಡಿ, ವಚನ ಧರ್ಮ ಶರಣರಿಂದ ಪೋಷಿತವಾದುದರಿಂದ ಈ ಧರ್ಮಕ್ಕೆ ಶರಣ ಧರ್ಮ ಅಂತ ಹೆಸರು ಬಂದಿದೆ ಎಂದರು.

ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಧರ್ಮ ಪ್ರಚಾರವನ್ನು ಮಾಡಿದ ಮಹಾನ್ ದಾರ್ಶನಿಕ ಬಸವಣ್ಣನವರು ಜ್ಯೋತಿಯಾತ್ರೆಯ ನೇತೃತ್ವವನ್ನು ಪ್ರಭುಲಿಂಗ ಸ್ವಾಮಿಗಳು ನಾಡಿನಾದಂತ ಸಂಚರಿಸಿ ಬಸವ ತತ್ವ ವಚನ ಸಾಹಿತ್ಯ ಬಸವ ಧರ್ಮದ ಪ್ರಚಾರವನ್ನು ಕಳೆದ 20 ವರ್ಷಗಳಿಂದ ಕೈಗೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಬೆಳಗಾವಿಯ ವಿಶ್ವಗುರು ಬಸವ ಮಂಟಪದ ಶ್ರೀ ಸದ್ಗುರು ಬಸವಲಿಂಗ ಸ್ವಾಮೀಜಿ ಮಾತನಾಡಿ, ಪವಿತ್ರ ಶ್ರಾವಣ ಮಾಸದಲ್ಲಿ ಬಸವಣ್ಣನವರ ಐಕ್ಯವಾದಂತಹ ದಿನವನ್ನು ಬಸವ ಪಂಚಮಿಯನ್ನು ಪ್ರತಿಯೊಬ್ಬ ಶರಣರು ಆಚರಿಸಬೇಕೆಂದು ಹೇಳಿದರು.

ಬಸವೇಶ್ವರ ಜಾತ್ರಾ ಸಮಿತಿ ಅಧ್ಯಕ್ಷ ಮಹಾಂತೇಶ ಆದಿಗೊಂಡ, ಶ್ರೀಕಾಂತ ಕೊಟ್ರಶೆಟ್ಟಿ, ಬೆಳಗಾವಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಅಶೋಕ ಬೆಂಡಿಗೇರಿ ಮಾತನಾಡಿದರು.

ವಿನುತ ಕಲ್ಲೂರ ದಯಾನಂದ, ಜಾಲಗೇರಿ ಶ್ರೀಧರ ಕುಂಬಾರ, ಶಿವಾನಂದ ತೋಳನೂರ, ಸುಭಾಷ್ ಚಕ್ರಮುನಿ, ಶಿವಾನಂದ ಮಠಪತಿ, ಡಾ. ಮಲ್ಲಿಕಾರ್ಜುನ ಹಳ್ಳಿ, ಲಕ್ಷ್ಮಣ ಚೌಗುಲೆ, ಸುನಿಲ್ ಬೇದರಕರ ಇತರರು ಉಪಸ್ಥಿತರಿದ್ದರು.