ಹುಕ್ಕೇರಿ: ಹಿಂದು ಧರ್ಮ ಅವನತಿಯಲ್ಲಿದ್ದಾಗ ಶಂಕರಾಚಾರ್ಯರು ದೇಶಾದ್ಯಂತ ಸಂಚರಿಸಿ ಧರ್ಮ ಉಳಿವಿಗಾಗಿ ಹೋರಾಡಿದ್ದಾರೆ. ಅವರ ಕಾರ್ಯಕ್ಕೆ ದೇಶಾದ್ಯಂತ ಇರುವ ಮಠ, ಮಂದಿರಗಳೇ ಸಾಕ್ಷಿ ಎಂದು ಹನುಮಂತಾಚಾರ್ಯ ಚಿಪ್ಪಲಕಟ್ಟಿ ಹೇಳಿದರು.
ಪಟ್ಟಣದ ಶಿವ ಚಿದಂಬರ ಸೇವಾ ಸಮಿತಿ ಆಶ್ರಯದಲ್ಲಿ ಈಚೆಗೆ ಶಂಕರಾಚಾರ್ಯರ ಜಯಂತಿ ಆಚರಿಸಿ ಮಾತನಾಡಿದರು. ಪುರೋಹಿತ ಶ್ರೀಕಾಂತ ಜೋಶಿ, ಮಹಾದೇವ ಉಪಾಧ್ಯೆ, ದತ್ತಾತ್ರೇಯ ಜೋಶಿ ನೇತೃತ್ವದಲ್ಲಿ ರುದ್ರಾಭಿಷೇಕ ಜರುಗಿತು. ಸಾಮೂಹಿಕವಾಗಿ ಶಂಕರ ನಾಮಾವಳಿ ಪಠಿಸಿದರು. ನಂತರ ಭಜನಾ ಕಾರ್ಯಕ್ರಮ ಜರುಗಿತು. ಘಟಪ್ರಭಾದ ಶಿವ ಚಿದಂಬರ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಮಹಾಜನ ಅವರನ್ನು ಸನ್ಮಾನಿಸಲಾಯಿತು.
ಡಿ.ಎಲ್.ಕುಲಕರ್ಣಿ, ಗೋವಿಂದ ಮುತಾಲಿಕ, ಮಿಲಿಂದ ಕುಲಕರ್ಣಿ, ಸಂಜೀವ ಮುತಾಲಿಕ, ದತ್ತಾತ್ರೇಯ ಕುಲಕರ್ಣಿ, ಆನಂದ ನಾಡಗೌಡ, ಭಾವುರಾವ ಕುಲಕರ್ಣಿ, ವಿನಯ ದೇಸಾಯಿ, ಡಾ.ಅಭಯ ಕಾಲಕುಂದ್ರಿ, ಪ್ರಸಾದ ಕುಲಕರ್ಣಿ, ವಿವೇಕ ಕುಲಕರ್ಣಿ ಇತರರಿದ್ದರು.