ವಿಜಯಪುರ : ಭಾರತೀಯ ಪ್ರಜ್ಞಾಪರಂಪರೆಯಲ್ಲಿ ಶಿಖರಪ್ರಾಯವಾಗಿದ್ದ ಆಚಾರ್ಯ ಶಂಕರರು ಭಾರತೀಯ ಚಿಂತನೆಯ ಮೂಲವೆನಿಸಿದ ವೇದಗಳ ಸಾರ ಪ್ರತಿಪಾದಿಸುವ ಮೂಲಕ ಆಧ್ಯಾತ್ಮಿಕ ಪರಂಪರೆಯ ರಕರಾಗಿದ್ದರು ಎಂದು ಶಿಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅದ್ಭುತ ಬುದ್ಧಿಶಕ್ತಿಯ ಅತ್ಯುತ್ತಮ ಚಿಂತಕರಾಗಿದ್ದ ಶಂಕರರು ಉಪನಿಷತ್ತುಗಳ ಮಹಾನ್ ತಾತ್ವಿಕ ಸತ್ಯಗಳನ್ನು ಪ್ರಚಾರ ಮಾಡುವ ಮೂಲಕ ನಮ್ಮ ರಾಷ್ಟ್ರದ ನಿಜವಾದ ಸಾಂಸತಿಕ ಆಧಾರವನ್ನು ಮರುಶೋಧಿಸಿದ್ದಾರೆ. ಅವರ ಶ್ರಮಶೀಲ ನಂಬಿಕೆ ಮತ್ತು ದೇಶ ಸೇವೆ ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ಶಂಕರರು 8ನೇ ಶತಮಾನದಲ್ಲಿಯೇ ಹೇಳಿದ ಧಾರ್ಮಿಕ ತತ್ವ ವಿಚಾರಗಳು, ಏಕತೆ ಸಾರುವ ಅದ್ವೆತ ತತ್ವಾನವು ಇಂದಿನ 21ನೇ ಶತಮಾನದಲ್ಲಿಯೂ ಅತ್ಯಂತ ಪ್ರಸ್ತುತ ಎಂದರು.
ಬಸವರಾಜ ಸಾರವಾಡ ಮಾತನಾಡಿದರು. ಸುರೇಶ ಕತ್ನಳ್ಳಿ, ಗಿರಮಲ್ಲ ಹೊಸಟ್ಟಿ, ಆನಂದ ಗಂಗನಳ್ಳಿ, ಅಭಿಷೇಕ ಗುಣಕಿ, ಮಲ್ಲಿಕಾರ್ಜುನ ಗಾಣಿಗೇರ, ಸಂತೋಷ ವಾಲೀಕಾರ ಮತ್ತಿತರರಿದ್ದಾರೆ.