ಕೋಲಾರ : ಹಿಂದು ಧರ್ಮದ ಉನ್ನತಿಗಾಗಿ ಶೃಂಗೇರಿ, ಕೇದಾರ, ಜಗನ್ನಾಥಪುರಿ, ದ್ವಾರಕ ಹೀಗೆ ದೇಶದಲ್ಲಿ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ ಆತ್ಮಜ್ಞಾನದ ಮಾರ್ಗ ತೋರಿಸಿಕೊಟ್ಟ ಕೀರ್ತಿ ಶಂಕರಾಚಾರ್ಯರದ್ದು ಎಂದು ನಗರದ ಕೋಟೆ ಶೃಂಗೇರಿ ಶಂಕರ ಮಠದ ಧಮಾರ್ಧಿಕಾರಿ ಕೆ.ಎನ್.ರಾಮಕೃಷ್ಣ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಸಂಸತಿ ಇಲಾಖೆ ಆಶ್ರಯದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶ್ರೀ ಶಂಕರಾಚಾರ್ಯರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಸತ್ಯವನ್ನು ಸತ್ಯವೆಂದು ಭಾವಿಸಿದಾಗ ದು@ಖದ ಪರಂಪರೆ ಕಟ್ಟಿಟ್ಟ ಬುತ್ತಿ. ಇದಕ್ಕೆ ಪರಿಹಾರವೇ ಜ್ಞಾನಿ ಆಗುವುದು. ಉಪನಿಷತ್ ಸಾರವೇ ಆಗಿರುವ ತತ್ವಮಸಿ, ಅಹಂ ಬ್ರಹ್ಮಾಸ್ಮಿ, ಅಯಮಾತ್ಮ ಬ್ರಹ್ಮ, ಪ್ರಜ್ಞಾನಂ ಬ್ರಹ್ಮ ಈ ಮಹಾ ವಾಕ್ಯಗಳ ಶ್ರವಣ, ಮನನ ಮತ್ತು ಅನುಷ್ಠಾನಗಳ ಮೂಲಕ ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ನಾನು ಯಾರು ಎಂಬುದನ್ನು ಸಾಕ್ಷಾತ್ಕರಿಸಿಕೊಳ್ಳುವುದು ನಮ್ಮೆಲ್ಲರ ಜೀವನದ ಧ್ಯೇಯವಾಗಬೇಕು ಎಂಬುದೇ ಭಗವತ್ಪಾದಾಚಾರ್ಯ ಶ್ರೀಶಂಕರರ ಸಾರ್ವಕಾಲಿಕ ಸಂದೇಶವೆಂದು ತಿಳಿಸಿದರು. ಉಪ ತಹಸೀಲ್ದಾರ್ ಹಂಸಾ ಮರಿಯಾ ಮಾತನಾಡಿ, ಶಂಕರಾಚಾರ್ಯರ ತತ್ವಗಳನ್ನು ಪಾಲಿಸುವ ಮೂಲಕ ಸುಂದರ ಸಮಾಜ ನಿರ್ಮಿಸೋಣ, ಅವರ ಆದರ್ಶವನ್ನು ಪಾಲಿಸೋಣ ಎಂದು ತಿಳಿಸಿದರು. ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷಿ$್ಮ, ಶೃಂಗೇರಿ ಶಂಕರ ಮಠ, ಶಂಕರಸೇವಾ ಸಮಿತಿ ಪದಾಧಿಕಾರಿಗಳಾದ ಡಾ.ಎಂ.ವಿ.ಜಯರಾಂ, ರವಿಶಂಕರ್ ಇದ್ದರು.