ಜಿಲ್ಲೆ

ಸತ್ತೂರಿನಲ್ಲಿ ಶಂಕರ ಜಯಂತಿ 12ರಂದು

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಸತ್ತೂರಿನ ನಾರಾಯಣ ನಾರಾಯಣ ಬಳಗದ ಆಶ್ರಯದಲ್ಲಿ ಉದಯಗಿರಿಯ ಡಿ.ಕೆ. ಜೋಶಿ ಅವರ ಮನೆಯಲ್ಲಿ ಮೇ 12ರಂದು ಸಂಜೆ 6ರಿಂದ 7ರವರೆಗೆ ಶಂಕರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಾ. ವಾಚಸ್ಪತಿ ಶಾಸ್ತ್ರೀಗಳು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು `ಶಂಕರಾಚಾರ್ಯರ ಉಪದೇಶಗಳು' ವಿಶೇಷ ಉಪನ್ಯಾಸ ನೀಡುವರು. ಕಾರ್ಯಕ್ರಮಕ್ಕೂ ಮೊದಲು ನಾರಾಯಣಿ ಭಜನಾ ಮಂಡಳಿಯಿ0ದ ಭಜನೆ ಮತ್ತು ಬಳಗದ ಸದಸ್ಯರಿಂದ ಶ್ರೀಹರಿ ವಾಯು ಗುರುಗಳ ಪಾರಾಯಣ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.