ಜಿಲ್ಲೆ

ಪ್ರಮಾಣ ವಚನ ಸ್ವೀಕರಿಸುವಾಗ ದೋಷ: ಮತ್ತೊಮ್ಮೆ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಶಂಕರ ಪಾಟೀಲ್ ಮುನೇನಕೊಪ್ಪ

ಬೆಂಗಳೂರು: ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಶಂಕರ ಪಾಟೀಲ್​ ಮುನೇನಕೊಪ್ಪ ಅವರು ಸಚಿವರಾಗಿ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಿದರು.

ಮುನೇನಕೊಪ್ಪ ಅವರು ರಾಜ್ಯಪಾಲರ ಕಚೇರಿಯಲ್ಲಿ ಏಕಾಂಗಿಯಾಗಿ ಪ್ರಮಾಣ ಸ್ವೀಕಾರ ಮಾಡಿದರು. ಇಂದು ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸುವಾಗ ತಾಂತ್ರಿಕ ದೋಷ ಕಂಡುಬಂದಿತ್ತು. ಅಧಿಕಾರ ಪ್ರಮಾಣವನ್ನೇ 2 ಬಾರಿ ಓದಿದ್ದ ಮುನೇನಕೊಪ್ಪ ಅವರು ಗೌಪ್ಯತಾ ಪ್ರಮಾಣ ವಿಧಿಯನ್ನು ಪೂರೈಸಿರಲಿಲ್ಲ.

ದೋಷ ಅರಿವಾದ ಬಳಿಕ ರಾಜಭವನವನ್ನು ಸಂಪರ್ಕಿಸಿ, ರಾಜ್ಯಪಾಲರ ಎದುರು ಮುನೇನಕೊಪ್ಪ ಮತ್ತೊಮ್ಮೆ ಪ್ರಮಾಣ ವಿಧಿ ಸ್ವೀಕಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.