ಜಿಲ್ಲೆ

ಜನರ ಮನಸ್ಸಿನಲ್ಲಿ ಶಂಕರ್‌ನಾಗ್ ಸದಾಜೀವಂತ: ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಶ್ಲಾಘನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ ಶಂಕರ್‌ನಾಗ್ ಜನರ ಮನದಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಶ್ಲಾಘನೆ ವ್ಯಕ್ತಪಡಿಸಿದರು.

ಇಲ್ಲಿನ ಅಶೋಕ್‌ನಗರದ ಸರೋವರ ಹೋಟೆಲ್ನಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಆಯೋಜಿಸಿದ್ದ ಶಂಕರ್ ನಾಗ್ ಜನ್ಮದಿನದ ಅಂಗವಾಗಿ ಪೌರಕಾರ್ಮಿಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಂಕರ್‌ನಾಗ್ ಅವರು ಎಲ್ಲ ಕೆಲಸದಲ್ಲೂ ಯಶಸ್ಸು ಕಾಣಲು ಪರಿಶ್ರಮ ಕಾರಣ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಶಂಕರ್‌ನಾಗ್ ಬದುಕಿದ್ದು ಕಡಿಮೆ ವರ್ಷವಾದರೂ ಅವರ ಸಾಧನೆ ದೊಡ್ಡದಾಗಿದೆ ಎಂದು ಹೇಳಿದರು.

ನಗರಸಭೆ ಸದಸ್ಯರಾದ ರವಿ, ಶಿವಲಿಂಗು, ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು, ಮುಖಂಡರಾದ ವಸಂತ್‌ಕುಮಾರ್, ಸೋಮಶೇಖರ್, ರಮೇಶ್, ಸುರೇಶ್, ರವೀಂದ್ರ, ಬಸವರಾಜು, ವೆಂಕಟೇಶ್ ಇದ್ದರು.