ಆಲೂರು-ಸಿದ್ದಾಪುರದಲ್ಲಿ ಅರೆಭಾಷೆ ಗೌಡ ಸಮಾಜದ ವತಿಯಿಂದ ಹುತ್ತರಿ ಹಬ್ಬ ಆಚರಣೆ ಸಂದರ್ಭ ಗದ್ದೆಯಿಂದ ಕದಿರು ತೆಗೆದುಕೊಂಡು ಬರುತ್ತಿರುವುದು. 
ಜಿಲ್ಲೆ

ಅರೆಭಾಷೆ ಗೌಡ ಸಮಾಜದಿಂದ ಸುಗ್ಗಿ ಹಬ್ಬ ಆಚರಣೆ

ನಾಗೇಶ ಎಸ್

ಶನಿವಾರಸಂತೆ: ಸೋಮವಾರಪೇಟೆ ತಾಲೂಕಿನ ಆಲೂರು, ಸಿದ್ದಾಪುರ, ಕಂತೆಬಸವನಹಳ್ಳಿ, ದೊಡ್ಡಕಣಗಾಲು, ಚಿಕ್ಕ ಕಣಗಾಲು, ಮಾಲಂಬಿ ಮುಂತಾದ ಗ್ರಾಮಗಳಲ್ಲಿ ಅರೆಭಾಷೆ ಗೌಡ ಜನಾಂಗದವರು ಮತ್ತು ಕೊಡವ ಜನಾಂಗದವರು ಅಲ್ಪ ಪ್ರಮಾಣದಲ್ಲಿದ್ದರೂ ಸೋಮವಾರ ರಾತ್ರಿ ಹುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಆಲೂರು-ಸಿದ್ದಾಪುರದ ಅರೆಭಾಷೆ ಗೌಡ ಸಮಾಜ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ವತಿಯಿಂದ ಪ್ರತಿವರ್ಷದಂತೆ ಸಾಮೂಹಿಕವಾಗಿ ಹುತ್ತರಿ ಹಬ್ಬವನ್ನು ಆಚರಿಸಲಾಯಿತು. ಸಂಜೆ 7.30ಕ್ಕೆ ದೇವಸ್ಥಾನದಲ್ಲಿ ನೆರೆಕಟ್ಟಿ ರಾತ್ರಿ 8.30ಕ್ಕೆ ಆಲೂರುಸಿದ್ದಾಪುರದ ಬೈಮನ ಕಾಂತಿ ಚಂಗಪ್ಪ ಅವರ ಗದ್ದೆಯಲ್ಲಿ ಬೆಳೆಗೆ ಸಾಂಪ್ರದಾಯಕವಾಗಿ ಪೂಜಿಸಿದ ನಂತರ ಕದಿರು ತೆಗೆದು ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನವನ್ನು ಪ್ರವೇಶಿಸಿ, ರಾತ್ರಿ 9ಕ್ಕೆ ಕದಿರು ಕಟ್ಟಲಾಯಿತು. ಹಬ್ಬದಲ್ಲಿ ಪಾಲ್ಗೊಂಡ ಬಾಂಧವರಿಗೆ ಕದಿರಿ ವಿತರಿಸಲಾಯಿತು.

ಜನಾಂಗದವರ ಸಾಂಪ್ರದಾಯಿಕ ಉಡುಗೆ ಧರಿಸಿ ಹುತ್ತರಿ ಹಬ್ಬ ಆಚರಿಸಿದರು. ಪ್ರಮುಖರಾದ ಎಡಕೇರಿ ಜಯರಾಮ್, ಪರ್ಲಕೋಟಿ ಸತೀಶ್, ಕರಕರನ ಪೆಮ್ಮಯ್ಯ, ತೊತ್ತಿಯನ ಚಂದ್ರಶೇಖರ್, ಬೈಮನ ಮಹೇಶ್, ಕೆಮ್ಮರನ ದೇವಿಕಾಂತ್, ಕೈಬಿಲಿ ಬೇಬಿ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.