ಜಿಲ್ಲೆ

ಛಾಯಾಗ್ರಾಹಕರ ಬದುಕು ಅತಂತ್ರ

reportermys

ಮಾಲಂಬಿ ದಿನೇಶ್ ಶನಿವಾರಸಂತೆ
ಒಂದು ಕಾಲದಲ್ಲಿ ಛಾಯಾಗ್ರಾಹಣ ವೃತ್ತಿ ಲಾಭದಾಯಕ ವೃತ್ತಿಯಾಗಿತ್ತು. ಸ್ಟುಡಿಯೊ ಮಾಲೀಕ ಮತ್ತು ಛಾಯಾಗ್ರಾಹಕರು ಛಾಯಾಗ್ರಾಹಕ ವೃತ್ತಿ ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ, ಪ್ರಸ್ತುತ ಛಾಯಾಗ್ರಾಹಕರು ವಿವಿಧ ಕಾರಣಗಳಿಂದ ಅತಂತ್ರ ಪರಿಸ್ಥಿತಿಯಲ್ಲಿ ಪರಿತಪಿಸುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ಗ್ರಾಹಕರು ದಾಖಲಾತಿಗೆ ಸಂಬಂಧಪಟ್ಟಂತೆ ಭಾವಚಿತ್ರ ತೆಗೆಸಿಕೊಳ್ಳಲು ಮಾತ್ರ ಸ್ಟುಡಿಯೋಗಳಿಗೆ ಹೋಗುತ್ತಿರ ಲಿಲ್ಲ, ನಿಶ್ಚಿತತಾರ್ಥ, ಮದುವೆ ಸೇರಿದ್ದಂತೆ ಇತರೆ ಎಲ್ಲಾ ಖಾಸಗಿ ಸಮಾರಂಭಗಳಿಗೆ ಛಾಯಾಚಿತ್ರಗಾರರನ್ನು ಕರೆಸಿಕೊಳ್ಳುತ್ತಿದ್ದರು. ಪ್ರತಿಯೊಂದು ಪಟ್ಟಣ, ನಗರಗಳಲ್ಲಿ ಸ್ಟುಡಿಯೋ ಒಂದು ಉದ್ದಿಮೆಯಾಗಿ ಬೆಳೆದಿತ್ತು.

ಸ್ಟುಡಿಯೋಗಳಲ್ಲಿ ಪೋಟೋಗ್ರಾಪರ್‌ಗಳಿಗೆ ಕೆಲಸ ಸಿಕ್ಕಿತ್ತು. ಯುವಕರಿಗೆ ನಿರುದ್ಯೋಗ ಸಮಸ್ಯೆ ನೀಗಿತ್ತು. ಮದುವೆ ಸಂದರ್ಭ ಛಾಯಾಗ್ರಾಹಕರಿಗೆ ಬಿಡುವು ಇಲ್ಲದಷ್ಟು ಕೆಲಸ ಇರುತ್ತಿತ್ತು. ಪೊಲೀಸ್ ಇಲಾಖೆಯವರು ಸಂಬಂಧ ಪಟ್ಟ ದಾಖಲಾತಿಗಾಗಿ ಛಾಯಾಗ್ರಾಹಕ ರು ಕರೆಸಿಕೊಳ್ಳುತ್ತಿದ್ದರು.

ವಿದ್ಯಾವಂತ ಯುವಕರು ಬ್ಯಾಂಕಿನಲ್ಲಿ ಸಾಲ ಪಡೆದು ಸ್ಟುಡಿಯೋ ಮಾಡಿ ಛಾಯಾಗ್ರಾಹಕರಿಗೆ ಕೆಲಸ ಕೊಡುತ್ತಿದ್ದರು. ೧೫ ವರ್ಷದ ಹಿಂದೆ ಸ್ಟುಡಿಯೋ ಮತ್ತು ಕ್ಯಾಮರಾ ಡಿಜಿಟಲ್‌ಕರಣಗೊಂಡ ನಂತರ ಸ್ಟುಡಿಯೋಗಳಲ್ಲಿ ಗ್ರಾಹಕನಿಗೆ ೫ ನಿಮಿಷದಲ್ಲಿ ಭಾವಚಿತ್ರ ಪ್ರಿಂಟ್ ತೆಗೆದು ಕೊಡುವಷ್ಟು ಛಾಯಾಗ್ರಹಣ ಕ್ಷೇತ್ರ ಆಧುನಿಕ ಮತ್ತು ತಂತ್ರಜ್ಞಾನವಾಗಿ ಬದಲಾಗಿದೆ. ಹಿಂದೆ ಕ್ಯಾಮರಕ್ಕೆ ರೋಲ್ ಹಾಕಬೇಕಿತ್ತು.
ಸ್ಮಾರ್ಟ್‌ಫೋನ್ ಲಗ್ಗೆ ಛಾಯಾಗ್ರಾಹಕಣ ವೃತ್ತಿಗೆ ಹೊಡೆತ ಬಿದ್ದಿದೆ.

ಸ್ಮಾರ್ಟ್‌ಫೋನ್, ಚಿಕ್ಕಪುಟ್ಟ ಡಿಜಿಟಲ್ ಕ್ಯಾಮರಾ ಬಂದ ಮೇಲೆ ಛಾಯಾಗ್ರಾಹಕರು ಮತ್ತು ಸ್ಟುಡಿಯೋ ಮಾಲೀಕರಿಗೆ ಬಾರಿ ಹೊಡೆತ ಬಿದ್ದಿದೆ. ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್‌ಫೋನ್ ಇದ್ದು ಎಂಗೆಜ್‌ಮೆಂಟ್, ಇತರೆ ಚಿಕ್ಕಪುಟ್ಟ ಸಮಾರಂಭಗಳಲ್ಲಿ ತಾವೆ ಸ್ಮಾರ್ಟ್ ಫೋನಿನಲ್ಲಿ ಛಾಯಾಚಿತ್ರ ಮತ್ತು ವಿಡಿಯೋ ತೆಗೆದುಕೊಂಡು ಅದನ್ನು ಎಡಿಟಿಂಗ್ ಮಾಡಿಕೊಂಡು ಅವುಗಳನ್ನು ತನ್ನ ಮೊಬೈನಲ್ಲೆ ನೋಡಿಕೊಳ್ಳುತ್ತಾರೆ.

ಕೆಲವು ಮೊಬೈಲ್‌ನಲ್ಲಿ ತೆಗೆದ ತಮ್ಮ ಮನೆಯ ಸಮಾರಂಭದಲ್ಲಿ ನಡೆದ ಪೋಟೋಗಳನ್ನು ಪೆನ್‌ಡ್ರೈವ್ ನಲ್ಲಿ ಹಾಕಿಕೊಂಡು ಸ್ಟುಡಿಯೋದಲ್ಲಿ ಒಂದೆರೆಡು ಪ್ರಿಂಟ್ ತೆಗೆಸಿಕೊಳ್ಳುತ್ತಾರೆ. ಮತ್ತೆ ಕೆಲವು ಗ್ರಾಹಕರು ಚಿಕ್ಕಪುಟ್ಟ ಡಿಜಿಟಲ್ ಕ್ಯಾಮರಾ ಇಟ್ಟುಕೊಂಡು ಸಭೆ, ಸಮಾರಂಭದಲ್ಲಿ ಫೋಟೋ ಮತ್ತು ವಿಡಿಯೋ ಚತ್ರೀಕರಣ ಮಾಡುತ್ತಾರೆ. ಇದರಿಂದ ಸ್ಟುಡಿಯೋ ಮಾಲೀಕರಿಗೆ ಮತ್ತು ಛಾಯಾಗ್ರಾಹಕರಿಗೆ ಬಾರಿ ಹೊಡೆತ ಬಿದ್ದಿದೆ.

**
ಇಪ್ಪತ್ತು ವರ್ಷದಿಂದ ಛಾಯಾಗ್ರಾಹಕನಾಗಿ ದುಡಿಯುತ್ತಿದ್ದೇನೆ. ಐದಾರು ವರ್ಷದ ಹಿಂದಿನಿಂದ ಗ್ರಾಹಕರ ಕೈಯಲ್ಲಿ ಸ್ಮಾರ್ಟ್‌ಫೋನ್ ಇದ್ದು, ತಮ್ಮ ಕುಟುಂಬದಲ್ಲಿ ನಡೆಯುವ ಸಮಾರಂಭಗಳಲ್ಲಿ ತಾವೇ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಮಾಡುತ್ತಿ
ದ್ದಾರೆ. ಇದರಿಂದ ಸ್ಟುಡಿಯೋಗಳಿಗೆ ಗ್ರಾಹಕರು ಬರುತ್ತಿಲ್ಲ. ಕೋವಿಡ್ ಬಂದ ಮೇಲೆ ಛಾಯಾಗ್ರಾಹಕರ ಬದುಕು ದುಸ್ತರವಾಗಿದೆ. ಗಿರೀಶ್, ಛಾಯಾಗ್ರಾಹಕ, ಕಾವ್ಯಶ್ರೀ ಸ್ಟುಡಿಯೊ, ಶನಿವಾರಸಂತೆ.

**
ನಮಗೆ ಮದುವೆ ಸೀಸನ್‌ಗಳಲ್ಲಿ ಮಾತ್ರ ಬೇಡಿಕೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಫೋಟೋ, ವಿಡಿಯೋ ಮಾಡಿಕೊಳ್ಳುತ್ತಿರುವುದರಿಂದ ಸ್ಟುಡಿಯೋಗಳಿಗೆ ಗ್ರಾಹಕರು ಬರುವುದು ಕಮ್ಮಿಯಾಗುತ್ತಿದೆ. ಹೇಮಂತ್, ಶೈನ್ ಸ್ಟುಡಿಯೋ, ಶನಿವಾರಸಂತೆ.

**
ಸ್ಮಾರ್ಟ್‌ಫೋನ್ ಬಂದಿರುವುದರಿಂದ ಛಾಯಾಗ್ರಾಹಕರಿಗೆ ಬಾರಿ ಹೊಡೆತ ಬಿದ್ದಿದೆ, ಗ್ರಾಹಕರು ಸ್ಟುಡಿಯೋಗಳಿಗೆ ಬರುವುದು ಕಮ್ಮಿಯಾಗಿ ರುವುದರಿಂದ ಸ್ಟುಡಿಯೋ ನಡೆಸಲು ಕಷ್ಟವಾಗುತ್ತಿದೆ. ಮದುವೆ ಸಮಾರಂಭ ನಡೆಯುವ ಸಮಯದಲ್ಲಿ ಸ್ಟುಡಿಯೋಗಳಲ್ಲಿ ಸ್ವಲ್ಪ ಮಟ್ಟಿಗೆ ಕೆಲಸ ಇರುತ್ತದೆ. ಉಳಿದ ಸಂದರ್ಭ ಬೇರೆ ಕೆಲಸಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ. ನವೀನ್ ನಾಯರ್, ಶಾಂತಲಾ ಸ್ಟುಡಿಯೋ, ಶನಿವಾರಸಂತೆ.

**
ಈಗ ಶಾಲಾ-ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳ ಚಿತ್ರೀಕರಣ ಡಿಜಿಟಲ್ ಕ್ಯಾಮರ, ಸ್ಮಾರ್ಟ್‌ಫೋನ್‌ಗಳ್ಲಿ ಮಾಡುತ್ತಿದ್ದಾರೆ. ಗ್ರಾಹಕರು ಅಗತ್ಯಕ್ಕೆ ತಕ್ಕಂತೆ ಭಾವಚಿತ್ರ ತೆಗೆಸಿಕೊಳ್ಳಲು ಮಾತ್ರ ಸ್ಟುಡಿಯೋಗೆ ಬರುತ್ತಾರಷ್ಟೆ. ಇದರಿಂದ ಸ್ಟುಡಿಯೋ ನಡೆಸಲು ಕಷ್ಟವಾಗುತಿ
್ತದೆ. ರಾಜು, ಪ್ರೀತಮ್ ಸ್ಟುಡಿಯೋ, ಶನಿವಾರಸಂತೆ.

**
ಸ್ಟುಡಿಯೋ ಮತ್ತು ಕ್ಯಾಮರಾ ಎಲ್ಲವೂ ಡಿಜಿಟಲ್‌ಕರಣಗೊಂಡಿದೆ. ಸ್ಟುಡಿಯೋ ಸ್ಥಾಪಿಸಲು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರು ತ್ತೇವೆ. ಆದರೆ, ಈಗ ಗ್ರಾಹಕರು ಸ್ಟುಡಿಯೋಗಳಿಗೆ ಕೇವಲ ಸೀಸನ್ ಸಂದರ್ಭ ಬರುತ್ತಾರೆ. ಗ್ರಾಹಕರು ವಿರಳವಾಗಿರುವುದರಿಂದ ಛಾಯಾಗ್ರಾಹಕ ವೃತ್ತಿ ನಂಬಿ ಜೀವನ ನಡೆಸಲು ಕಷ್ಟವಾಗುತ್ತಿದೆ. ಅಭಿನ್ ಚಂದ್ರು, ಅಭಿ ಸ್ಟುಡಿಯೋ, ಶನಿವಾರಸಂತೆ.

**
ಈಗ ಪಟ್ಟಣದಲ್ಲಿ ಸ್ಟುಡಿಯೋಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದು ಕಡೆ ಗ್ರಾಹಕರು ಸ್ವಂತ ಡಿಜಿಟಲ್ ಕ್ಯಾಮರಾ, ಸ್ಮಾರ್ಟ್‌ಫೋನ್ ಇಟ್ಟುಕೊಂಡು ತಾವೆ ಛಾಯಾಚಿತ್ರ ತೆಗೆಯುವುದು, ವಿಡಿಯೋ ಚಿತ್ರೀಕರಣ ಮಾಡುತ್ತಿರುವುದರಿಂದ ಛಾಯಾಗ್ರಾಹಕರ ಆದಾಯಕ್ಕೆ ಆದಾಯಕ್ಕೆ ಕುತ್ತ ಬಂದಿದೆ. ಈಗ ಸ್ಟುಡಿಯೋ ಮಾಲೀಕರು ಹಾಗೂ ಛಾಯಾಗ್ರಾಹಕರಿಗೆ ಸಂಕಷ್ಟ ಆಗುತ್ತಿದ್ದರೂ ಹೇಗೋ ಕಷ್ಟದಿಂದ ಜೀವನ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ವಿನಯ್, ಹರ್ಷ ಸ್ಟುಡಿಯೋ, ಶನಿವಾರಸಂತೆ.

**
ಕೋವಿಡ್ ಸಂದರ್ಭ ಛಾಯಾಗ್ರಾಹಕರ ಸಂಕಷ್ಟಕ್ಕೆ ಸಿಲುಕಿ ಜೀವನ ನಿರ್ವಹಣೆಗೆ ಬೇರೆ ಕೆಲಸ ಮಾಡುತ್ತಿದ್ದೇವು. ಕೋವಿಡ್ ಪಿಡುಗು ಇಲ್ಲದಿದ್ದರೂ ಸ್ಟುಡಿಯೋಗಳಿಗೆ ಗ್ರಾಹಕರು ಬರುತ್ತಿಲ್ಲ. ಸ್ಟುಡಿಯೋ ಮಾಲೀಕರು ಮತ್ತು ಛಾಯಾಗ್ರಾಹಕರ ಜೀವನ ಮೊದಲು ಇದ್ದಂತೆ ಈಗ ಇಲ್ಲ. ಬೇರೆ ಕೆಲಸಗಳಿಗೆ ಹೋಗುವ ಸ್ಥಿತಿಯಲ್ಲಿ ಇಲ್ಲದೆ ಸ್ಟುಡಿಯೋಗಳಿಗೆ ಪ್ರತಿದಿನ ಬರುತ್ತಿದ್ದೇವೆ ಅಷ್ಟೆ. ಗಣೇಶ್, ನೆನಪು ಸ್ಟುಡಿಯೋ, ಶನಿವಾರಸಂತೆ.

**
ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಸ್ಟುಡಿಯೋಗಳು ಕೇವಲ ಮದುವೆ ಸೀಸನ್‌ಗೆ ಮಾತ್ರ ಸೀಮಿತವಾಗಿದೆ. ಆದರೂ, ನಾವು ಪ್ರತಿದಿನ ಸ್ಟುಡಿಯೋಕ್ಕೆ ಬಂದು ಗ್ರಾಹಕರ ಬರುವಿಕೆಗಾಗಿ ಕಾಯುವ ವಾತಾವರಣ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ನಮ್ಮ ಮನೆಯಲ್ಲಿ ಗದ್ದೆ, ತೋಟದಲ್ಲಿ ವ್ಯವಸಾಯ ಮಾಡುತ್ತೇನೆ. ಅಗತ್ಯ ಇದ್ದಾಗ ಮಾತ್ರ ಸ್ಟುಡಿಯೋಗೆ ಬರುತ್ತೇನೆ. ಒಟ್ಟಾರೆ ಇಂದು ಛಾಯಾಗ್ರಾಹಕರ ಬದುಕು ದುಸ್ಥರಗೊಂಡಿದೆ. ಸುಗಂದ, ಸ್ಟುಡಿಯೋ ಮಾಲೀಕ, ಶನಿವಾರಸಂತೆ.