ಜಿಲ್ಲೆ

ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ

ವಿಜಯವಾಣಿ ಸುದ್ದಿಜಾಲ ಶನಿವಾರಸಂತೆ

ಬೇಳ್ಳರಳ್ಳಿ ಹುಲಸೆ ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ೪೦ಕ್ಕೂ ಹೆಚ್ಚು ಯುವಕರು ಗುರುವಾರ ಜೆಡಿಎಸ್ ಸೇರ್ಪಡೆ ಯಾದರು.

ಬೆಳ್ಳರಳ್ಳಿ ಹುಲಸೆಯ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಸಂಭವನೀಯ ಅಭ್ಯರ್ಥಿ ನಾಪಂಡ ಮುತ್ತಪ್ಪ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

೨೮ ವರ್ಷದಿಂದ ಕೊಡಗಿನ ಅಭಿವೃದ್ಧಿಯು ಕುಂಠಿತವಾಗಿದೆ. ಸಾಕಷ್ಟು ರಸ್ತೆಗಳು ಗುಂಡಿ ಬಿದ್ದಿದ್ದು ಸಂಚಾರಕ್ಕೆ ಯೋಗ್ಯವಾಗಿಲ್ಲ. ಜನಪ್ರತಿನಿಧಿ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಮತದಾರರಿಗೆ ಮಾತ್ರ ಬೆಂಬಲ ನೀಡುತ್ತಿದ್ದು, ಸಾರ್ವಜನಿಕರ ಕೆಲಸ ಕಾರ್ಯ ಮಾಡುತ್ತಿಲ್ಲ ಎಂದು ನಾಪಂಡ ಮುತ್ತಪ್ಪ ಟೀಕಿಸಿದರು.

ತಾರತಮ್ಯ ಮಾಡಿ ಜನರಿಗೆ ಸಾಕಷ್ಟು ತೊಂದರೆ ನೀಡಲಾಗುತ್ತಿದೆ. ಇವೆಲ್ಲವೂ ಸರಿಯಾಗಬೇಕಾದರೆ ಬದಲಾವಣೆ ಅನಿವಾರ್ಯ. ಹಾಗಾಗಿ ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಕೊಡಗಿನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ಮೊದಲ ಆದ್ಯತೆ ನೀಡಲಾಗುವು ದೆಂದು ನಾಪಂಡ ಮುತ್ತಪ್ಪ ಹೇಳಿದರು.

ಈ ಸಂದರ್ಭ ಜೆಡಿಎಸ್ ಮುಖಂಡರಾದ ಅಜ್ಜಳ್ಳಿ ರವಿ, ತ್ರಿನೇಶ್, ಕುಮಾರಸ್ವಾಮಿ, ಶಿವಕುಮಾರ್, ಅರುಣ್, ಚಂದ್ರು, ಹೂವಣ್ಣ, ದಯಾಕರ್, ರವೀಶ್ ನಾಗರಾಜ್ ಮತ್ತಿತರರು ಇದ್ದರು.