ಜಿಲ್ಲೆ

ಶನಿಶಾಂತಿ ಹೋಮ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿವಿಧ ರಾಶಿಗಳ ಶನಿ ದೋಷ ಹಾಗೂ ಸಾಡೇಸಾತಿ ಪರಿಹಾರಾರ್ಥ ಮೇ 27ರಂದು ಇಲ್ಲಿನ ಉದಯನಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಶನಿ ಶಾಂತಿ ಹೋಮ ಏರ್ಪಡಿಸಲಾಗಿದೆ.

ಪಂ. ರಾಮಾಚಾರ್​ ಅಧ್ಯಾಪಕ ನೇತೃತ್ವದಲ್ಲಿ ಹೋಮ ನಡೆಯಲಿದ್ದು, ಮೇಷ, ಮಿಥುನ, ಕುಂಭ, ಸಿಂಹ, ವೃಶ್ಚಿಕ, ಇತರ ರಾಶಿಗಳ ಜನರು ಇದರ ಪ್ರಯೋಜನ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಪಂ.ರಾಮಾಚಾರ ಅಧ್ಯಾಪಕ ಅವರನ್ನು ಸಂಪಕಿರ್ಸಬಹುದು ಎಂದು ಪ್ರಕಟಣೆ ತಿಳಿಸಿದೆ.