ವಸ್ತಾರೆ ಗ್ರಾಮದ ಮಂಗಳವಾರಪೇಟೆ ಶನೈಶ್ಚರ ಸ್ವಾಮಿಗೆ ಹಣ್ಣಿನ ಅಲಂಕಾರ. 
ಜಿಲ್ಲೆ

ಶನೈಶ್ಚರ ಸ್ವಾಮಿ ಕೆಂಡೋತ್ಸವ

ಎಸ್.ಎನ್.ರವೀಂದ್ರ

ಆಲ್ದೂರು: ವಸ್ತಾರೆ ಗ್ರಾಮದ ಮಂಗಳವಾರಪೇಟೆ ಗುರು ಶನೈಶ್ಚರ ಸ್ವಾಮಿ ಕೆಂಡೋತ್ಸವ ಮತ್ತು 28ನೇ ವಾರ್ಷಿಕೋತ್ಸವ ಶನಿವಾರ ನಡೆಯಿತು.

ಕಳಸ ಹೊತ್ತು ತಂದು ಪದ್ಮಾವತಿ ದೇವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿರುವ ಶನೈಶ್ಚರ ಸ್ವಾಮಿ, ಭೂತರಾಜ, ಶಕ್ತಿದೇವತೆ ಚಾಮುಂಡೇಶ್ವರಿ, ಪಂಜರವಳ್ಳಿ ಅಣ್ಣಪ್ಪ ಸ್ವಾಮಿ, ನಾಗ ದೇವತೆಗೆ ವಿಶೇಷ ಅಭಿಷೇಕ ಹಾಗೂ ಪೂಜೆ ನಡೆಯಿತು. ನಂತರ ಕೆಂಡೋತ್ಸವ ನಡೆಯಿತು. ಶುಕ್ರವಾರ ತಡರಾತ್ರಿ ಅಣ್ಣಪ್ಪ ಸ್ವಾಮಿಗೆ ಪಂಚಕಜ್ಜಾಯ ಸೇವೆ ನಡೆಯಿತು. ನಾಥ ಪಂಥದ ಮದನ್‌ನಾಥ್ ಗುರುಗಳು ಚಂಡಿಕಾ ಹೋಮ ಹಾಗೂ ಕೆಂಡೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದ ಧರ್ಮದರ್ಶಿ ಮಹೇಶ್, ಕಾರ್ಯದರ್ಶಿ ಲತೇಶ್, ಮಂಜುನಾಥ್, ಪ್ರಕಾಶ್ ಹಾಗೂ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.