ಶಮಿತ್ 
ಜಿಲ್ಲೆ

ಥ್ರೋಬಾಲ್‌ನಲ್ಲಿ ಶಮಿತ್ ಖಾರ್ವಿ ರಾಜ್ಯಮಟ್ಟಕ್ಕೆ

ಇಂದಿರಾ ಎನ್ ಕೆ

ಗಂಗೊಳ್ಳಿ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ಮತ್ತು ಹಿಂದು ಪದವಿ ಪೂರ್ವ ಕಾಲೇಜು ಶಿರ್ವ ಆಶ್ರಯದಲ್ಲಿ ಶಿರ್ವದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಥ್ರೋಬಾಲ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಮಿತ್ ಖಾರ್ವಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಗಂಗೊಳ್ಳಿಯ ಮಂಜುನಾಥ ಖಾರ್ವಿ ಮತ್ತು ರೇಖಾ ಖಾರ್ವಿ ದಂಪತಿ ಪುತ್ರ.