ಗಂಡಸಿ : ಹಿರಿಯ ಪ್ರಾಥಮಿಕ ಶಾಲೆಗಳ 2025-26ನೇ ಸಾಲಿನ ಗಂಡಸಿ ಹೋಬಳಿ ಮಟ್ಟದ ಕ್ರೀಡಾಕೂಟ ಇತ್ತೀಚೆಗೆ ಗಂಡಸಿ ಹ್ಯಾಂಡ್‌ಪೋಸ್ಟ್ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ಗಂಡಸಿ ಶ್ರೀ ಶಂಭುಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ ( ಬಿ.ಜಿ.ಎಸ್) ಶಾಲಾ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿದ್ದಾರೆ. ವಾಲಿಬಾಲ್ ಬಾಲಕರ ವಿಭಾಗ ಹೇಮಂತ್ ಕೃಷ್ಣ ತಂಡ (ಪ್ರ), ವಾಲಿಬಾಲ್ ಬಾಲಕಿಯರ ವಿಭಾಗ ಸ್ಫೂರ್ತಿ ತಂಡ (ಪ್ರ), 100 ಮೀ. ಓಟದಲ್ಲಿ ಕರುಣಾಕರ (ಪ್ರ). 400 ಮೀ. ಓಟದಲ್ಲಿ ಮಣಿಕಂಠ (ದ್ವಿ), 4100 ಮೀ. ಓಟದಲ್ಲಿ ಸೋನು ತಂಡ (ದ್ವಿ). 400 ಮೀ. ಓಟದಲ್ಲಿ ಇಂಚರಾ (ದ್ವಿ), ಗುಂಡು ಎಸೆತದಲ್ಲಿ ಮಣಿಕಂಠ (ದ್ವಿ), ಹನಿ ಪಿ.ಗೌಡ ಮತ್ತು ಪವನ್ ಕುಮಾರ್ (ತೃ), ಎತ್ತರ ಜಿಗಿತದಲ್ಲಿ ಸೈಯದ್ ಶಹಜಾದ್ ಆಲಿ (ದ್ವಿ), ಗುಂಡು ಎಸೆತದಲ್ಲಿ ಕುಶಾಲ್ (ತೃ), ಉದ್ದ ಜಿಗಿತದಲ್ಲಿ ಯಾಶಿಕ (ತೃ), ಎತ್ತರ ಜಿಗಿತದಲ್ಲಿ ಸೋನು (ತೃ), 200 ಮೀ.ಓಟದಲ್ಲಿ ತ್ರಿಶಾ (ತೃ), 100/4 ಮೀ. ಓಟದಲ್ಲಿ ಕರುಣಾಕರ ತಂಡ (ತೃ), 100 ಮೀ. ಓಟದಲ್ಲಿ ಸ್ಪೂರ್ತಿ (ದ್ವಿ) ಸ್ಥಾನ ಪಡೆದಿದ್ದಾರೆ.
ಕ್ರೀಡಾಕೂಟದ ಎಲ್ಲ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿ ಶಾಲೆಗೆ ಕೀರ್ತಿ ತಂದ ಶಾಲೆಯ ಕ್ರೀಡಾಪಟುಗಳಿಗೆ ಮುಖ್ಯ ಶಿಕ್ಷಕಿ ಆಶಾರಾಣಿ, ಶಿಕ್ಷಕರಾದ ಶ್ವೇತಾ, ಧನುಷ್, ಪರ್ವಿನ್, ಮಮತಾ, ಶಾಲಿನಿ, ಪವಿತ್ರಾ, ಪೂರ್ಣಿಮಾ, ಗೌರಮ್ಮ, ಪುಣ್ಯಾ, ಶಿವಕುಮಾರ್, ತಮ್ಮೇಗೌಡ, ಚಂದನಾ ಮತ್ತು ಪಾಲಕರು ಅಭಿನಂದಿಸಿದ್ದಾರೆ.