ಜಿಲ್ಲೆ

ವಚನ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಶಾಮರಾಯಗೌಡ ಮಾಲಿ ಪಾಟೀಲ ನೇಮಕ

ಕಲಬುರಗಿ: ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಶಹಾಬಾದ ತಾಲೂಕದ ಅಧ್ಯಕ್ಷರಾಗಿ ಶಾಮರಾಯಗೌಡ ಮಾಲಿ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.

ಪರಿಷತ್ತಿನ ಜಿಲ್ಲಾ ಘಟಕ ಕಲಬುರಗಿ ಸಮಿತಿಯ ಅನುಮೋದನೆಯ ಮೇರೆಗೆ ಶಾಮರಾಯಗೌಡ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ತಾವು ಈ ಕೂಡಲೇ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡು ಸಂಸ್ಥೆಯ ಸಂಘಟನೆ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಂಸ್ಥೆಯನ್ನು ಸದೃಢಗೊಳಿಸಲು ಸಮರ್ಪಣಾಭಾವದಿಂದ ಶ್ರಮಿಸಬೇಕೆಂದು ಜಿಲ್ಲಾಧ್ಯಕ್ಷರು ನೇಮಕಾತಿ ಆದೇಶದಲ್ಲಿ ಸೂಚಿಸಿದ್ದಾರೆ.

ಶಾಮರಾಯಗೌಡ ನೇಮಕಕ್ಕೆ ಮರತೂರ ಗ್ರಾಮದ ಪಿಕೆಪಿಎಸ್ ಎನ್ ಅಧ್ಯಕ್ಷರಾದ ಡಾ. ರವೀಂದ್ರ ನರೋಣಿ, ಮುಖಂಡರಾದ ಶಿವಾನಂದ ಮೈನಾಳ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.