ಮಂಗಳೂರು : ಶಕ್ತಿ ನಗರದ ಶಕ್ತಿಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಹುಲಿ ದಿನ ಆಚರಿಸಲಾಯಿತು.
ಶಕ್ತಿ ್ತ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಸುಷ್ಮಾ ಸತೀಶ್ ಅವರು ಮಕ್ಕಳಿಗೆ ಅಂತಾರಾಷ್ಟ್ರೀಯ ಹುಲಿಯ ದಿನದ ಮಹತ್ವ ವಿವರಿಸಿದರು.
ಹುಲಿಯ ರಕ್ಷಣೆಯ ಕುರಿತಂತೆ ಜಾಗೃತಿ ಮೂಡಿಸುವ ಫಲಕಗಳನ್ನು ಪ್ರದರ್ಶಿಸಲಾಯಿತು. ಶಿಕ್ಷಕರು ಪುಣ್ಯಕೋಟಿ ಮತ್ತು ಹುಲಿ ಕಾವ್ಯದ ಕಥೆ ಒಳಗೊಂಡ ಆಕರ್ಷಕ ನೃತ್ಯ ನಾಟಕ ಪ್ರದರ್ಶಿಸಿದರು. 4 ವರ್ಷದಿಂದ 5 ವರ್ಷದೊಳಗಿನ ಮಕ್ಕಳು ಹುಲಿ ವೇಷ ಧರಿಸಿ ನರ್ತಿಸಿದರು. ಶಕ್ತಿ ಎಜುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಕೆ.ಸಿ.ನಾಕ್, ಪ್ರಧಾನ ಸಲಹೆಗಾರ ರಮೇಶ್ ಕೆ. ಮತ್ತು ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು.