ಜಿಲ್ಲೆ

ಶಕ್ತಿ ವಸತಿ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ

Mangaluru - Hariprasad Rai


ಮಂಗಳೂರು : ಶಕ್ತಿ ನಗರದ ಶಕ್ತಿ ವಸತಿ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಪರಮ ವೀರಚಕ್ರ ಪ್ರಶಸ್ತಿ ಪಡೆದ ಸೈನಿಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕಾರ್ಗಿಲ್ ವಿಜಯದಲ್ಲಿ ಭಾಗಿಯಾದ ಭಾರತೀಯ ಸೈನಿಕರ ತ್ಯಾಗ ಬಲಿದಾನಗಳ ಕುರಿತಾದ ಸಾಕ್ಷೃ ಚಿತ್ರ ಪ್ರದರ್ಶಿಸಲಾಯಿತು.
ಯುದ್ಧ ಸ್ಮಾರಕ ಕದ್ರಿ ಮಂಗಳೂರು ಇಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ ಆಚರಣೆಯಲ್ಲಿ ಶಕ್ತಿ ಪ್ರಾಥಮಿಕ ಶಾಲಾ ಮಕ್ಕಳು ಶಿಕ್ಷಕರೊಂದಿಗೆ ಭಾಗವಹಿಸಿದ್ದರು. ವಿದ್ಯಾರ್ಥಿನಿ ಭಾವಿಕಾ ಕಾರ್ಗಿಲ್ ದಿನದ ಪ್ರಾಮುಖ್ಯತೆ ತಿಳಿಸಿದರು. ಹೇಮಿಲಾ ಕಾರ್ಯಕ್ರಮ
ನಿರೂಪಿಸಿದರು.