ಹುಬ್ಬಳ್ಳಿ : ಆಷಾಢ ಏಕಾದಶಿ ಅಂಗವಾಗಿ ಇಲ್ಲಿನ ಸಂತೋಷ ನಗರ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜು. 17ರಂದು ಸಂಜೆ 6 ಗಂಟೆಯಿಂದ ರಾತ್ರಿ 7.30ರವರೆಗೆ ವಿದುಷಿ ಅನುಪಮಾ ಮಂಗವೇಡೆ (ಗುಡಿ) ಅವರಿಂದ ದಾಸವಾಣಿ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಬಲಾ ಸಾಥಿದಾರರಾಗಿ ಮನುಕುಮಾರ ಹಿರೇಮಠ, ರಾಘವೇಂದ್ರ ನಾಕೋಡ್ ಮತ್ತು ಹಾಮೋನಿಯಂ ಸಾಥಿದಾರರಾಗಿ ವಿಜಯಕುಮಾರ್ ಅರ್ಕಸಾಲಿ ಪಾಲ್ಗೊಳ್ಳುವರು. ರತ್ನ ಸಾವಲ್ಕರ್ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಶ್ರೀಮಠದ ಅಧ್ಯಕ್ಷ ಗೋವಿಂದಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.