ಗೋಕಾಕ: ೇತ್ರದ ವಿದ್ಯಾರ್ಥಿಗಳ ಶೈಣಿಕ ಪ್ರಗತಿಗಾಗಿ ಹಲವಾರು ಯೋಜನೆ ಅನುಷ್ಠಾನದೊಂದಿಗೆ ಶಾಸಕ ರಮೇಶ ಜಾರಕಿಹೊಳಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಯುವನಾಯಕ ಅಮರನಾಥ ಜಾರಕಿಹೊಳಿ ಹೇಳಿದರು.
ನಗರದ ಶಾಸಕರ ಗೃಹ ಕಚೇರಿಯಲ್ಲಿ ೇತ್ರದ ಮೂರು ಸರ್ಕಾರಿ ಶಾಲೆಗಳು ಪಿಎಂಎಸ್ ಯೋಜನೆಗೆ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಶಿಣ ಇಲಾಖೆ ಮತ್ತು ಎಸ್ಡಿಎಂಸಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಗೋಕಾಕ ಶೈಣಿಕ ವಲಯದ ಕೊಣ್ಣೂರು ಗ್ರಾಮದ ಕೆಬಿಎಸ್, ಬೆಣಚಿನಮರಡಿಯ ಆರ್ಎಂಎಸ್ಎ ಎಚ್ಪಿಎಸ್ ಮತ್ತು ಜಿಎಚ್ಎಸ್ ಹಾಗೂ ನಗರದ ಸರ್ಕಾರಿ ಪ್ರೌಢಶಾಲೆ (ಜಿಪಿಯುಸಿ) ಸೇರಿ ಒಟ್ಟು ಮೂರು ಶಾಲೆಗಳು ಶಾಸಕರ ಪ್ರಯತ್ನದಿಂದ ಪಿಎಂಎಸ್ ಯೋಜನೆಗೆ ಆಯ್ಕೆಯಾಗಿದ್ದು, ಐದು ವರ್ಷಗಳಲ್ಲಿ ತಲಾ 2 ಕೋಟಿ ರೂ. ಅನುದಾನದಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಶೈಣಿಕ ೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಲವಾಗಿ ವಿದ್ಯಾರ್ಥಿಗಳ ಸಾಧನೆಗೆ ಅವಕಾಶ ಒದಗಿವೆ. ಹೀಗಾಗಿ, ಅಭಿವೃದ್ಧಿಗೆ ಸಹಕಾರ ಅಗತ್ಯವಾಗಿದೆ ಎಂದರು.
ತಹಸೀಲ್ದಾರ್ ಡಾ.ಮೋಹನ ಭಸ್ಮೆ, ತಾಪಂ ಇಒ ಪರಶುರಾಮ ಸ್ತೆ, ಬಿಇಒ ಜಿ.ಬಿ.ಬಳಗಾರ, ಬಿಸಿಯೂಟ ಯೋಜನಾಧಿಕಾರಿ ಎ.ಬಿ.ಮಲಬನ್ನವರ, ಬಿಜೆಪಿ ತಾಲೂಕಾಧ್ಯ ರಾಜೇಂದ್ರ ಗೌಡಪ್ಪಗೋಳ, ಟಿ.ಆರ್.ಕಾಗಲ, ಎಂ.ಎಲ್.ತೋಳಿನವರ, ಭೀಮಗೌಡ ಪೊಲೀಸಗೌಡರ, ಸುರೇಶ ಸನದಿ ಇತರರಿದ್ದರು.