ಜಿಲ್ಲೆ

ಷಾ.ಮಿಯಾಚಂದ್ ಹೈಸ್ಕೂಲ್ ಅಭಿವೃದ್ಧಿಗೆ ಅನುದಾನ

ರುದ್ರಪ್ಪ ವಾಲಿ

ಕಂಪ್ಲಿ: ಪಟ್ಟಣದ ಗಂಗಾನಗರದ 21,23ನೇ ವಾರ್ಡ್‌ಗಳಲ್ಲಿ ಕೆ.ಕೆ.ಆರ್.ಡಿ.ಬಿಯಿಂದ ತಲಾ 50ಲಕ್ಷ ರೂ. ಚರಂಡಿ ಹಾಗೂ ಸಿಸಿರಸ್ತೆ ಅಭಿವೃದ್ಧಿ, ಅಂಬೇಡ್ಕರ್‌ವೃತ್ತದಿಂದ ನಡುವಿನ ಮಸೀದಿತನಕ 50ಲಕ್ಷ ರೂ. ವೆಚ್ಚದಲ್ಲಿ ನೆಲಹಾಸು ನಿರ್ಮಾಣ ಕಾಮಗಾರಿಗೆ ಶನಿವಾರ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ ಮಾತನಾಡಿ, ಗಂಗಾನಗರದ ರಸ್ತೆಯನ್ನು ಅಭಿವೃದ್ಧಿಗೊಳಿಸುವುದಾಗಿ ಚುನಾವಣಾ ಸಂದರ್ಭದಲ್ಲಿ ಶಾಸಕರು ಮಾತು ಕೊಟ್ಟಂತೆ 50ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಮುಂದಾಗಿದ್ದು ಗಂಗಾನಗರದ ಜನತೆಯ ಬಹುವರ್ಷಗಳ ಕನಸು ನನಸಾಗಿದೆ ಎಂದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಷಾ.ಮಿಯಾಚಂದ್ ಹೈಸ್ಕೂಲ್ ಛಾವಣಿ ಜೀರ್ಣೋದ್ಧಾರಕ್ಕೆ 24ಲಕ್ಷ ರೂ., ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ 48ಲಕ್ಷ ರೂ.ಅನುದಾನ ಒದಗಿಸಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್‌ರೆಹಮಾನ್, ಸದಸ್ಯರಾದ ಕೆ.ಎಸ್.ಚಾಂದ್‌ಬಾಷಾ, ಸಿ.ಆರ್.ಹನುಮಂತ, ಲಡ್ಡುಹೊನ್ನೂರವಲಿ, ಪ್ರಮುಖರಾದ ಬಿ.ಈರಪ್ಪ, ಎಲಿಗಾರ ನಾಗರಾಜ, ವೀರಭದ್ರಪ್ಪ, ಬಿ.ನಾರಾಯಣಪ್ಪ, ಗಂಗಣ್ಣ, ವಾಸುದೇವ, ಅಯ್ಯೋದಿ ವೆಂಕಟೇಶ, ಯಾಳ್ಪಿ ಅಬ್ದುಲ್‌ಮುನಾಫ್, ಟಿ.ಮಲ್ಲಿಕಾರ್ಜುನ, ಹನುಮಂತಪ್ಪ, ಸಂತು, ಸಂದೀಪ್, ನಾಗರಾಜ, ರಾಘವೇಂದ್ರ, ಅಕ್ಕಿಜಿಲಾನ್, ಕೆ.ಷಣ್ಮುಖಪ್ಪ ಇತರರಿದ್ದರು.