ಮಂಗಳೂರು: ಮಂಗಳೂರಿನಿಂದ ಮಸ್ಕತ್‌ಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಶಾಹೀನ್ ಚಂಡಮಾರುತದ ಕಾರಣ ಇಡೀ ದಿನ ಹಾರಲಾಗದೆ ಕೊನೆಗೆ ರದ್ದಾಗಿದೆ. ಇದರಿಂದಾಗಿ ಪ್ರಯಾಣಿಕರು ಪೇಚಿಗೆ ಸಿಲುಕಿದರು. ವಿಮಾನದಲ್ಲಿ ತೆರಳಬೇಕಾದ ೧೦೦ಕ್ಕೂ ಅಧಿಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಲಕಳೆಯುವಂತಾಯಿತು. ಸಂಜೆ ವೇಳೆಗಷ್ಟೇ ವಿಮಾನ ರದ್ದಾಗಿದೆ, ಅಕ್ಟೋಬರ್ ೭ರಂದು ವಿಮಾನ ತೆರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಸಂಜೆಯ ನಂತರವಷ್ಟೇ ಪ್ರಯಾಣಿಕರು ತಮ್ಮ ಊರಿಗೇ ಮರಳುವಂತಾಯಿತು.