ಜಿಲ್ಲೆ

ಯುಜಿಸಿ ಕರಡು ಪ್ರಸ್ತಾಪ ತಿರಸ್ಕರಿಸಿ

ರಮೇಶ ಮೇಳಕುಂದಾ

ಕಲಬುರಗಿ: ವಿಶ್ವವಿದ್ಯಾಲಯಗಳ ಅನುದಾನ ಆಯೋಗದ (ಯುಜಿಸಿ) ೨೦೨೫ರ ಉನ್ನತ ಶಿP್ಷÀಣ ಕರಡು ನಿಯಮ ಪ್ರಸ್ತಾಪವೂ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಇದನ್ನು ತಿರಸ್ಕಾರ ಮಾಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಆಗ್ರಹಿಸಲಾಯಿತು.

ಗುವಿವಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ವಿಶ್ವವಿದ್ಯಾಲಯ ಅನುದಾನ ಆಯೋಗದ ಹೊಸ ಕರಡು ಉನ್ನತ ಶಿಕ್ಷಣವನ್ನು ಕೇಂದ್ರೀಕರಣ ಮತ್ತು ಕಾರ್ಪೊರೇಟ್ ವ್ಯವಸ್ಥೆಗೆ ಅವಕಾಶ ನೀಡುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಈಗಾಗಲೇ ವಿವಿಧ ರಾಜ್ಯಗಳಲ್ಲಿ ಉಪ ಕುಲಪತಿ ನೇಮಕ ಗೊಂದಲ, ಸಂಘರ್ಷ ನಡೆಯುತ್ತಿದೆ. ನೂತನ ಕರಡು ಈ ಸಮಸ್ಯೆಯನ್ನು ಹೆಚ್ಚಿಸಲಿದೆ. ದೇಶದ ಶಿಕ್ಷಣ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಖಾಸಗಿ ಉದ್ಯಮಿಗಳಿಗೆ ದಾರಿ ಮಾಡಿಕೊಡುವ ಜತೆಗೆ ಮಾರುಕಟ್ಟೆ ಆಧಾರಿತ ಸಂಶೋಧನೆಯನ್ನು ಕೊಂಡ್ಯೊಯುತ್ತಿದೆ. ಮೀಸಲಾತಿ ಬಗ್ಗೆಯೂ ಉಲ್ಲೇಖಿಸಿಲ್ಲ. ಕೂಡಲೇ ಹೊಸ ಕರಡನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರವನ್ನು ಗುವಿವಿ ಕುಲಸಚಿವ ರಮೇಶ ಲಂಡನಕರ್‌ಗೆ ಸಲ್ಲಿಸಲಾಯಿತು. ಜಿಲ್ಲಾ ಸಹ ಕಾರ್ಯದರ್ಶಿ ಸುಜಾತಾ ವೈ., ಜಿಲ್ಲಾ ಉಪಾಧ್ಯಕ್ಷೆ ಪ್ರೇಮ, ಪ್ರಮುಖರಾದ ನಾಗಮ್ಮ, ಭರತ ಅಭಿ, ಮಾಲಾಶ್ರೀ, ಹುಲಗಮ್ಮ ಇತರರಿದ್ದರು.