ಮೈಸೂರು: ನಗರದ ಬುದ್ಧ ವಿಹಾರದಲ್ಲಿ ಶಿಕ್ಷಣದ ವ್ಯಾಪಾರೀಕರಣ, ಪಠ್ಯ ಪುಸ್ತಕಗಳ ಕೇಸರಿಕರಣ, ಎನ್‌ಇಪಿ ವಿರೋಧಿಸಿ ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಒತ್ತಾಯಿಸಿ ಗುರುವಾರ ಎಸ್‌ಎಫ್‌ಐ ನಗರ ಸಮ್ಮೇಳನ ನಡೆಯಿತು.
ಸಮ್ಮೇಳನದಲ್ಲಿ ನಗರ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹೇಂದ್ರ ಪ್ರಸಾದ್ (ಅಧ್ಯಕ್ಷ), ಡಿ. ಅಭಿ (ಕಾರ್ಯದರ್ಶಿ), ಭರತ್, ಕಿರಣ್ ಕುಮಾರ್ ( ಉಪಾಧ್ಯಕ್ಷರು), ಸುಚಿತ್, ಅಮೋಘ (ಜಂಟಿ ಕಾರ್ಯದರ್ಶಿ), ಉಮಾ, ಬಿಂದುಶ್ರೀ, ಚಂದನಾ, ಸ್ನೇಹ, ಯತೀಶ್, ಮಾನ್ಯ, ರಂಜಿತಾ, ಮಹದೇವ್ ಸ್ವಾಮಿ (ಸದಸ್ಯರು) ಪದಾಧಿಕಾರಿಗಳಾಗಿ ಆಯ್ಕೆಗೊಂಡರು.
ಈ ಸಂದರ್ಭ ಎಸ್‌ಎಫ್‌ಐ ಪದಾಧಿಕಾರಿಗಳಾದ ಜಗದೀಶ್ ಸೂರ್ಯ, ಬಸವರಾಜು, ವಿಜಯ್ ಕುಮಾರ್, ಯತೀಶ್, ವೀರಭದ್ರ ಹಿರೇಮಠ್ ಹಾಗೂ ಇತರರು ಇದ್ದರು.